ಏಷ್ಯನ್ ಗೇಮ್ಸ್ 2018: ಟೆನಿಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಬೋಪಣ್ಣ-ಶರಣ್ ಜೋಡಿ!

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಚಿನ್ನ ಗೆದ್ದು ಬೋಪಣ್ಣ-ಶರಣ್ ಜೋಡಿ ಇತಿಹಾಸ ನಿರ್ಮಿಸಿದೆ...
ರೋಹನ್ ಬೋಪಣ್ಣ, ದಿವಿಜ್ ಶರಣ್
ರೋಹನ್ ಬೋಪಣ್ಣ, ದಿವಿಜ್ ಶರಣ್
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಚಿನ್ನ ಗೆದ್ದು ಬೋಪಣ್ಣ-ಶರಣ್ ಜೋಡಿ ಇತಿಹಾಸ ನಿರ್ಮಿಸಿದೆ. 
ಟೆನಿಸ್ ಡಬಲ್ ಪುರುಷರ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನಕ್ಕೆ ಮುತ್ತಿಟ್ಟಿದೆ. ಫೈನಲ್ ಪಂದ್ಯದಲ್ಲಿ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಬುದ್ಲಿಕ ಮತ್ತು ಡೇನಿಸ್ ಜೋಡಿಯನ್ನು 6-3, 6-4 ಸೆಟ್ ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. 
ಈ ಮೂಲಕ ಭಾರತದ ಖಾತೆಗೆ 6ನೇ ಚಿನ್ನದ ಪದಕ ಸೇರಿದೆ. ಭಾರತ ಇಲ್ಲಿಯವರೆಗೂ 6 ಚಿನ್ನ, 4 ಬೆಳ್ಳಿ ಮತ್ತು 13 ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 23 ಪದಕಗಳನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com