ಏಷ್ಯನ್ ಕ್ರೀಡಾಕೂಟ: 14 ವರ್ಷದ ರಾಷ್ಟ್ರೀಯ ದಾಖಲೆ ಮುರಿದ ಹಿಮಾ ದಾಸ್ 400 ಮೀಟರ್ ಫೈನಲ್ ಗೆ ಲಗ್ಗೆ!

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಗೇಮ್ಸ್ 2018 ನಲ್ಲಿ ಭಾರತದ ಭರವಸೆಯ ಅಥ್ಲೀಟ್ ಹಿಮಾ ದಾಸ್ 51.00 ಸೆಕೆಂಡ್ ಗಳಲ್ಲಿ ಗುರಿ ತಲುಪಿ....
ಹಿಮಾ ದಾಸ್
ಹಿಮಾ ದಾಸ್
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಗೇಮ್ಸ್ 2018 ನಲ್ಲಿ ಭಾರತದ ಭರವಸೆಯ ಅಥ್ಲೀಟ್ ಹಿಮಾ ದಾಸ್ 51.00 ಸೆಕೆಂಡ್ ಗಳಲ್ಲಿ ಗುರಿ ತಲುಪಿ 14 ವರ್ಷದ ರಾಷ್ಟ್ರೀಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 
ಹಿಮಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 400 ಮೀಟರ್ ಓಟದ ವಿಭಾಗದಲ್ಲಿ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ಈ ಮುನ್ನ 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆ ವೇಳೆ ಮಂಜಿತ್ ಕೌರ್ ದಾಖಲೆ ನಿರ್ಮಿಸಿದ್ದರು. ಇದೀಗ ಹಿಮಾ, ಮಂಜಿತ್  ಹೆಸರಿನ ದಾಖಲೆಯನ್ನು ಮುರಿದು ತಮ್ಮ ಹೆಸರಿನಲ್ಲಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.
ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜತೆಯಾಗಿ ಹಿಮಾ ಕಾಣಿಸಿಕೊಂಡಿದ್ದರು ಬಹರೇನ್‍ನ ಸಲ್ವಾ ಸಹ ಕ್ರೀಡಾಕೂಟದಲ್ಲಿ ಪದಕ ಗಳಿಸುವ ಭರವಸೆಯ ಕ್ರೀಡಾಪಟುವಾಗಿದ್ದಾರೆ.
ಕಳೆದ ತಿಂಗಳು ನಡೆದಿದ್ದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದಪದಕ ಗಳಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನ್ನುವ ಕೀರ್ತಿಗೆ ಹಿಮಾ ಪಾತ್ರರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com