ಏಷ್ಯನ್ ಗೇಮ್ಸ್: ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು!

ಪ್ರತಿಷ್ಠಿತ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ ಜೀಓಡಿಯು ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಐತಿಹಾಸಿಕ ಕಂಚಿನ ಪದಕ ಗಳಿಸಿದೆ.
ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ
ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ
ಜಕಾರ್ತಾ: ಪ್ರತಿಷ್ಠಿತ  ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ ಜೀಓಡಿಯು ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಐತಿಹಾಸಿಕ ಕಂಚಿನ ಪದಕ ಗಳಿಸಿದೆ.
ಬುಧವಾರ ನಡೆದ ಟಿಟಿ ಮಿಶ್ರ ಡಬಲ್ಸ್ ನಲ್ಲಿ ಶರತ್ -ಮಣಿಕಾ ಜೋಡಿ ಚೀನಾದ ವಾಂಗ್ ಚುಕಿನ್ ಮತ್ತು ಸನ್ ಯಿಂಗ್ಶಾ ಜೋಡಿ ವಿರುದ್ಧ 1-4ರ ಅಂತರದಲ್ಲಿ ಸೋಲನುಭವಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.
39 ನಿಮಿಷಗಳ ಕಾಲ ನಡೆದ ಸೆಮಿ-ಫೈನಲ್ ಪಂದ್ಯದಲ್ಲಿ 11-9, 11-5, 11-13, 11-4, 11-8ರಿಂದ ಬಾರತ ಕ್ರೀಡಾಳುಗಳ ವಿರುದ್ಧ ಚೀನಾ ಜೋಡಿ ಮೇಲುಗೈ ಸಾಧಿಸಿದೆ.
ಇದಕ್ಕೂ ಮುನ್ನ ನಡೆದಿದ್ದ ಕ್ವಾರ್ಟರ್ ಹಣಾಹಣಿಯಲ್ಲಿ ಭಾರತದ ಶರತ್ -ಮಣಿಕಾಜೋಡಿಯು ಉತ್ತರ ಕೊರಿಯಾದ ಅನ್ ಜಿ ಸಾಂಗ್ ಹಾಗೂ ಚಾ ಹೈಯೋ ಸಿಮ್ ಜೋಡಿಯನ್ನು 3-2 (4-11, 12-10, 6-11, 11-6, 11-8) ಅಂತರದಲ್ಲಿ ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com