ಏಷ್ಯನ್ ಗೇಮ್ಸ್ : ಸೀಮಾ ಪುನಿಯಾಗೆ ಕಂಚಿನ ಪದಕ

ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 18 ನೇ ಆವೃತ್ತಿಯ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಸೀಮಾ ಪುನಿಯಾ
ಸೀಮಾ ಪುನಿಯಾ

ಜಕಾರ್ತ : ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 18 ನೇ ಆವೃತ್ತಿಯ  ಕ್ರೀಡಾಕೂಟದ ಮಹಿಳೆಯರ  ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ  ಸೀಮಾ ಪೂನಿಯಾ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಜಿಬಿಕೆ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ 35 ವರ್ಷದ ಸೀಮಾ ಪುನಿಯಾ ಕಳೆದ ಆರು ವರ್ಷಗಳಲ್ಲಿಯೇ ಉತ್ತಮವಾದಂತಹ  62. 26 ಮೀಟರ್  ದೂರದವರೆಗೂ ಡಿಸ್ಕಸ್  ಎಸೆದರು. ಆದರೆ.  ಕಂಚಿನ ಪದಕಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಯಿತು.

ಚೀನಾದ ಚೆನ್ ಯಂಗ್ 65.12 ಮೀಟರ್ ದೂರ  ಡಿಸ್ಕಸ್ ಎಸೆಯುವ ಮೂಲಕ ಚಿನ್ನದ ಪದಕ ಪಡೆದುಕೊಂಡರು. ಇದು ಸೀಮಾ ಪುನಿಯಾಗಿಂತ 2.86 ಮೀಟರ್  ಹೆಚ್ಚು ದೂರವನ್ನು ಹೊಂದಿತ್ತು.

2014ರ ಇನ್ ಚೆಯಾನ್ ಪಂದ್ಯಾವಳಿಯಲ್ಲಿ 61.03 ಮೀ. ದೂರದವರೆಗೂ ಡಿಸ್ಕಸ್ ಎಸೆದಿದ್ದ ಸೀಮಾ ಪುನಿಯಾ ಮೂರನೇ   ಪ್ರಯತ್ನದಲ್ಲಿ  62. 26 ಮೀ. ದೂರದವರೆಗೂ ಎಸೆದು ಉತ್ತಮ ಪ್ರದರ್ಶನ ತೋರಿದರು.

ಮೊದಲ ಪ್ರಯತ್ನದಲ್ಲಿ ಚೆನ್ 59.61 ಮೀ. ದೂರ ಎಸೆದರೆ, ಸೀಮಾ 58. 51 ಮೀ. ದೂರ ಎಸೆದರು.  ನಂತರ ಚೀನಾದ ಇಬ್ಬರು ಸ್ಪರ್ಧಿಗಳ ನಡುವೆ ನಡೆದ ಹೋರಾಟ ನಡೆಯಿತು.
ಸೀಮಾ ಅವರನ್ನು ಹಿಂದಿಕ್ಕಿದ ಪೆಂಗ್  64. 58 ಮೀ. ದೂರ ಎಸೆದರು. ಮತ್ತೆ ಲಯಕ್ಕೆ ಮರಳಿದ ಚೆನ್ ಎರಡನೇ ಪ್ರಯತ್ನದಲ್ಲಿ  64. 45 ಮೀ. ದೂರದವರೆಗೂ ಡಿಸ್ಕಸ್ ಎಸೆದರು.

ನಾಲ್ಕನೇ ಪ್ರಯತ್ನದಲ್ಲಿ 63.81 ಮೀಟರ್ ದೂರ ಎಸೆದ ಫೆಗ್  ಎರಡನೇ ಸ್ಥಾನ  ಕಾಯ್ದುಕೊಂಡರು.  ಐದನೇ ಪ್ರಯತ್ನದಲ್ಲಿ  ಕೊನೆಯ ಹಂತಕ್ಕೆ ತಲುಪಿದ ಸೀಮಾ ಪುನಿಯಾ ಆರನೇ ಪ್ರಯತ್ನದಲ್ಲಿ 61. 18 ಮೀಟರ್  ದೂರ ಎಸೆದರು.

ಸೀಮಾ ಪುನಿಯಾ ನಾಲ್ಕು ಕಾಮನ್ ವೆಲ್ತ್ ಪದಕ ಹಾಗೂ ಎರಡು ಏಷ್ಯನ್ ಗೇಮ್ಸ್ ಪದಕಗಳನ್ನು ಗೆದ್ದ ಕೀರ್ತಿಗೆ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com