ಇಂಡಿಯಾ ಓಪನ್ ಬ್ಯಾಡ್ಮಿಂಟನ್: ನಾಲ್ಕರ ಘಟ್ಟ ತಲುಪಿದ ಪಿವಿ ಸಿಂಧು

ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸರಣಿಯ ಸೆಮಿ ಫೈನಲ್ಸ್ ತಲುಪಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು
ನವದೆಹಲಿ: ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು ಇಂಡಿಯಾ ಓಪನ್  ಬ್ಯಾಡ್ಮಿಂಟನ್ ಸರಣಿಯ ಸೆಮಿ ಫೈನಲ್ಸ್ ತಲುಪಿದ್ದಾರೆ.
ಸ್ಪೇನ್ ನ ಬೀಟ್ರೀಜ್ ಕೊಲರೀಸ್ ಅವರ ವಿರುದ್ಧ 21-12, 19-21, 21-11 ನೇರ ಸೆಟ್ ಗಳಿಂದ ಗೆಲುವು ಸಾಧಿಸಿದ ಸಿಂಧು ನಾಲ್ಕರ ಘಟ್ಟಕ್ಕೆ ತಲುಪಿದ್ದಾರೆ.
ಸಿಂಧು ತನ್ನ ಮುಂದಿನ ಸುತ್ತಿನಲ್ಲಿ ಥಾಯ್ ಲ್ಯಾಂಡಿನ ರಚಾನೊಕ್‌ ಇಂಟಾನನ್ ರನ್ನು ಎದುರಿಸಲಿದ್ದಾರೆ .
ಇದೇ ವೇಳೆ ಇಂದು ತಡರಾತ್ರಿ ನಡೆಯುವ ಇನ್ನೊಂದು ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ಭಾರತದ ಇನ್ನೋರ್ವ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಹ ಅಮೆರಿಕಾದ ಬೇವೀನ್ ಝಾಂಗ್ ಅವರ ವಿರುದ್ಧ ಸೆಣೆಸಲಿದ್ದಾರೆ.
ಇದಕ್ಕೂ ಮುನ್ನ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ಸ್ ನಲ್ಲಿ ಬಾರತ್ದ ಬಿ.ಸಾಯಿ ಪ್ರಣೀತ್ ಹಾಗೂ ಪರುಪಳ್ಳಿ ಕಶ್ಯಪ್ ತಮ್ಮ ಎದುರಾಳಿಗಳ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರನಡೆದಿದ್ದರು. ಚೈನಿಸ್ ತೈಪೆಯ ಚೌ ತಿನ್ ಚೆನ್ ವಿರುದ್ಧ ಪ್ರಣೀತ್ 21-15, 21-13ಅ ಅಂತರದಲ್ಲಿ ಪರಾಭವಗೊಂಡಿದ್ದರೆಿನ್ನೋರ್ವ ಆಟಗಾರ ಕಶ್ಯಪ್ ಚೀನಾದ ಕಿಯಾವೊ ಬಿನ್ ವಿರುದ್ಧ ಸೆಣೆಸಿ 16-21, 18-21 ಅಂತರದಲ್ಲಿ ಸೋಲನುಭವಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com