ನರೇಂದ್ರ ಬಾತ್ರಾ
ಕ್ರೀಡೆ
ಹೆಡ್ಡ ಅಧಿಕಾರಿಗಳು ಎಂದ ನರೇಂದ್ರ ಬಾತ್ರಾಗೆ ಕ್ರೀಡಾ ಇಲಾಖೆ ತಿರುಗೇಟು
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ ಅವರು ಕ್ರೀಡಾ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಹೆಡ್ಡ ಅಧಿಕಾರಿಗಳು ಎಂದು ಜರೆದಿದ್ದು ಇದಕ್ಕೆ ಕ್ರೀಡಾ...
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ ಅವರು ಕ್ರೀಡಾ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಹೆಡ್ಡ ಅಧಿಕಾರಿಗಳು ಎಂದು ಜರೆದಿದ್ದು ಇದಕ್ಕೆ ಕ್ರೀಡಾ ಸಚಿವಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕ್ರೀಡಾ ಸಚಿವಾಲಯ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾ ಕೂಟ ಆಯೋಜಿಸುವ ಮೊದಲು ಸರಿಯಾಗಿ ಪ್ರಕಟಣೆ ನೀಡಬೇಕು. ಆದರೆ ಅಧಿಕಾರಿಗಳು ಅಂತಹ ಕೆಲಸವನ್ನು ಮಾಡುತ್ತಿಲ್ಲ ಎಂದು ಮನಬಂದಂತೆ ಬಾತ್ರಾ ಟೀಕಿಸಿದ್ದರು.
ನರೇಂದ್ರ ಬಾತ್ರಾ ಹೇಳಿಕೆಯನ್ನು ಕ್ರೀಡಾ ಇಲಾಖೆ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ತೀವ್ರವಾಗಿ ಖಂಡಿಸಿದ್ದು ನಮ್ಮಲ್ಲಿ ಹೆಡ್ಡರು ಇರಬಹುದು. ಆದರೆ ನಿಮ್ಮಲ್ಲಿ ಇರುವವರು ಎಲ್ಲರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಿದವರೆ ಎಂದು ರಾಹುಲ್ ಭಟ್ನಾಗರ್ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ