ಗಾಯಗೊಂಡ ನಡಾಲ್
ಗಾಯಗೊಂಡ ನಡಾಲ್

ಮೊಣಕಾಲು ನೋವಿನಿಂದಾಗಿ ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ನಂ.1 ಆಟಗಾರ ನಡಾಲ್

ಮೊಣಕಾಲು ನೋವಿನಿಂದಾಗಿ ವಿಶ್ವದ ನಂಬರ್ 1 ಆಟಗಾರ ಸ್ಪೇನ್​ನ ರಾಫೆಲ್ ನಡಾಲ್ ಅವರು ಮಂಗಳವಾರ ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ....
Published on
ಮೆಲ್ಬರ್ನ್‌: ಮೊಣಕಾಲು ನೋವಿನಿಂದಾಗಿ ವಿಶ್ವದ ನಂಬರ್ 1 ಆಟಗಾರ ಸ್ಪೇನ್​ನ ರಾಫೆಲ್ ನಡಾಲ್ ಅವರು ಮಂಗಳವಾರ ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಎರಡನೇ ಬಾರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲುವು ಕನಸು ನುಚ್ಚು ನೂರಾಗಿದೆ.
ರಾಡ್‌ ಲೆವರ್ ಅಂಗಳದಲ್ಲಿ ಇಂದು ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾಟರ್ ಫೈನಲ್ ಪಂದ್ಯದಲ್ಲಿ ನಡಾಲ್ ಅವರು, ಮೊಣಕಾಲು ನೋವಿನ ನಡುವೆಯೂ ಕ್ರೋವೇಷಿಯಾದ ಮರಿನ್ ಸಿಲಿಕ್ ಅವರ ವಿರುದ್ಧ ತೀವ್ರ ಹೋರಾಟ ನಡೆಸಿದರು. ಆದರೆ ಐದನೇ ಸೆಟ್ ನಲ್ಲಿ ಗಾಯದ ಸಮಸ್ಯೆಯಿಂದ ಕುಸಿದು ಬಿದ್ದರು. ವೈದ್ಯಕೀಯ ಚಿಕಿತ್ಸೆಯ ನಂತರವೂ ನಡಾಲ್ ಅವರು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಪಂದ್ಯದಿಂದ ನಿವೃತ್ತಿ ಪಡೆದರು. 
ರಫೆಲ್‌ ನಡಾಲ್‌ ಅವರು ಐದು ಸೆಟ್‌ಗಳ ಕಠಿನ ಹೋರಾಟದಲ್ಲಿ ಮರಿನ್ ಸಿಲಿಕ್ ವಿರುದ್ಧ 3-6, 6-3, 6-7 (5/7), 6-2, 2-0 ಅಂತರದಿಂದ ವಿದಾಯ ಹೇಳಿದರು.
ಮರಿನ್ ಸಿಲಿಕ್ ಅವರು ಸೆಮಿ ಫೈನಲ್ ನಲ್ಲಿ ಕೈಲ್ ಎಡ್ಮಂಡ್ ಅವರನ್ನು ಎದುರಿಸಲಿದ್ದಾರೆ. ಸಿಲಿಕ್‌ ವಿರುದ್ಧ ನಡಾಲ್‌ ಈ ಹಿಂದೆ ಆರು ಬಾರಿ ಪರಸ್ಪರ ಮುಖಾಮುಖೀಯಾಗಿದ್ದು 5 ಬಾರಿ ಗೆಲುವಿನ ದಾಖಲೆ ಹೊಂದಿದ್ದಾರೆ.
2009ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ 5 ಗಂಟೆ 14 ನಿಮಿಷ ನಡೆದ ಹೋರಾಟದಲ್ಲಿ ಫರ್ನಾಂಡೋ ವಿರುದ್ಧ ಗೆಲುವಿನ ನಗೆ ಬೀರಿದ್ದರು. ನಡಾಲ್ 2009ರಲ್ಲಿ ಫೆಡರರ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದು. ನಂತರ 2012 ಮತ್ತು 2014ರಲ್ಲಿ ರನ್ನರ್ ಅಪ್ ಆಗಿದ್ದರು.

X

Advertisement

X
Kannada Prabha
www.kannadaprabha.com