ವಿಶ್ವ ಚಾಲೆಂಜ್ ಕಪ್ ಜಿಮ್ಯಾಸ್ಟಿಕ್ಸ್ : ದೀಪಾ ಕರ್ಮಕಾರ್ ಗೆ ಚಿನ್ನದ ಪದಕ

ಗಾಯದ ಸಮಸ್ಯೆಯಿಂದಾಗಿ ಸುಮಾರು 2 ವರ್ಷಗಳ ನಂತರ ಜಿಮ್ಯಾಸ್ಟಿಕ್ಸ್ ಕಣಕ್ಕಿಳಿದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ವಿಶ್ವ ಚಾಲೆಂಜ್ ಕಪ್ ಜಿಮ್ಯಾಸ್ಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Dipa Karmakar
Dipa Karmakar
ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ಸುಮಾರು 2 ವರ್ಷಗಳ ನಂತರ ಜಿಮ್ಯಾಸ್ಟಿಕ್ಸ್  ಕಣಕ್ಕಿಳಿದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ವಿಶ್ವ ಚಾಲೆಂಜ್ ಕಪ್  ಜಿಮ್ಯಾಸ್ಟಿಕ್ಸ್  ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 
ತ್ರಿಪುರಾದ ದೀಪಾ ಕರ್ಮಾಕರ್ 2016 ರ ರಿಯೋ ಒಲಂಪಿಕ್ಸ್ ನಲ್ಲಿ 4 ನೇ ಸ್ಥಾನ ಗಳಿಸಿದ್ದರು, ಇದಾದ ಬಳಿಕ ಮೊದಲ ಬಾರಿಗೆ ಜಿಮ್ಯಾಸ್ಟಿಕ್ಸ್  ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು 14.150 ಅಂಕಗಳನ್ನು ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.  ಗಾಯದ ಸಮಸ್ಯೆಯಿಂದ ಮರಳಿದ ಮೊದಲ ಹಂತದಲ್ಲೇ ದೀಪಾ ಕರ್ಮಕಾರ್ ವಿಶ್ವ ಚಾಲೆಂಜ್ ಕಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 
2016 ರ ನಂತರ ಎನೆಟ್ರೆರ್ ಕ್ರುಸಿಯೆಟ್ ಲಿಗಮೆಂಟ್ (ಎಸಿಎಲ್) ಸಮಸ್ಯೆಗೆ ಗುರಿಯಾಗಿದ್ದ ದೀಪಾ ಕರ್ಮಾಕರ್ ಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ಆಡಲು ಸಾಧ್ಯವಾಗಿರಲಿಲ್ಲ. ಈ ಟೂರ್ನಿಗೆ ಕೋಚ್ ವಿಶ್ವೇಶ್ವರ್ ನಂದಿ ಅವರೊಂದಿಗೆ ತೆರಳಿರುವ ದೀಪಾ ಕರ್ಮಕಾರ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com