ಹಿಮಾದಾಸ್ ನ ಕ್ರೀಡಾ ಸಾಧನೆಯಷ್ಟೇ ಅಲ್ಲ, ಆಕೆಯ ಸಾಮಾಜಿಕ ಕಳಕಳಿಯೂ ಅಭಿನಂದನಾರ್ಹ

ಚಿನ್ನದ ಪದಕವಷ್ಟೇ ಅಲ್ಲದೇ ಹಿಮಾ ದಾಸ್ ನ್ನುಹೊಗಳುವುದಕ್ಕೆ ಮತ್ತೊಂದು ಕಾರಣವೂ ಇದೆ. ಏಕೆಂದರೆ ಆಕೆ ಸಾಧನೆ ಮಾಡಿರುವುದು ಕೇವಲ ಕ್ರೀಡೆಯಲ್ಲಷ್ಟೇ ಅಲ್ಲ. ಸಾಮಾಜಿಕ ಕಳಕಳಿಯಲ್ಲೂ ಮಹತ್ತರವಾದುದ್ದನ್ನು.....
ಹಿಮಾದಾಸ್ ನ ಕ್ರೀಡಾ ಸಾಧನೆಯಷ್ಟೇ ಅಲ್ಲ, ಆಕೆಯ ಸಾಮಾಜಿಕ ಕಳಕಳಿಯೂ ಅಭಿನಂದನಾರ್ಹ
ಹಿಮಾದಾಸ್ ನ ಕ್ರೀಡಾ ಸಾಧನೆಯಷ್ಟೇ ಅಲ್ಲ, ಆಕೆಯ ಸಾಮಾಜಿಕ ಕಳಕಳಿಯೂ ಅಭಿನಂದನಾರ್ಹ
ಧಿಂಗ್: 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಅಸ್ಸಾಂ ಹುಡುಗಿ ಹಿಮಾ ದಾಸ್ ನ್ನು ಇಡೀ ಭಾರತವೇ ಇಂದು ಕೊಂಡಾಡುತ್ತಿದೆ. ಚಿನ್ನದ ಪದಕವಷ್ಟೇ ಅಲ್ಲದೇ ಆಕೆಯನ್ನು ಹೊಗಳುವುದಕ್ಕೆ ಮತ್ತೊಂದು ಕಾರಣವೂ ಇದೆ. ಏಕೆಂದರೆ ಆಕೆ ಸಾಧನೆ ಮಾಡಿರುವುದು ಕೇವಲ ಕ್ರೀಡೆಯಲ್ಲಷ್ಟೇ ಅಲ್ಲ. ಸಾಮಾಜಿಕ ಕಳಕಳಿಯಲ್ಲೂ ಮಹತ್ತರವಾದುದ್ದನ್ನು ಸಾಧಿಸಿದ್ದಾಳೆ.
ತನ್ನ ಹಿಟ್ಟೂರಾದ ಅಸ್ಸಾಂನ ಧಿಂಗ್ ಗ್ರಾಮದಲ್ಲಿದ್ದ ಕಳ್ಳಭಟ್ಟಿ ಹಾಗೂ ಸಾರಾಯಿ ಅಂಗಡಿಗಳ ಬಾಗಿಲು ಬಂದ್ ಮಾಡಿಸುವುದರಲ್ಲಿಯೂ ಹಿಮಾ ದಾಸ್ ಪ್ರಮುಖ ಪಾತ್ರ ವಹಿಸಿದ್ದೂ ಅಲ್ಲದೇ ನೆರೆಯ ಗ್ರಾಮವನ್ನೂ ಕಳ್ಳಭಟ್ಟಿ ಹಾಗೂ ಸಾರಾಯಿ ಮುಕ್ತವಾಗುವಂತೆ ಮಾಡಿದ್ದಾಳೆ. 
ಹಿಮಾ ದಾಸ್ ಮೊದಲಿನಿಂದಲೂ ಧೈರ್ಯವಂತ ಹುಡುಗಿ, ಅಕ್ರಮಗಳ ವಿರುದ್ಧ ಮಾತನಾಡುವುದಕ್ಕೆ ಎಂದಿಗೂ ಹಿಂಜರಿಯುವುದಿಲ್ಲ. ನಮಗೂ ನಮ್ಮ ರಾಷ್ಟ್ರಕ್ಕೂ ಆಕೆ ಮಾದರಿಯ ಹುಡುಗಿಯಾಗಿದ್ದಾಳೆ ಎಂದು ನೆರೆಮನೆಯವರು ಹಿಮಾ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com