2012 ರ ಲ್ಲಿ ಲಂಡನ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೆಶೋರ್ನ್ ವಾಲ್ಕಾಟ್ ಅವರಂತಹ ಘಟಾನುಘಟಿ ಆಟಗಾರರಿಗೆ ಪೈಪೋಟಿ ನೀಡಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ನೀರಜ್ ಚೋಪ್ರಾ 85.17 ಮೀಟರ್ ನಷ್ಟು ದೂರ ಥ್ರೋ ಮಾಡಿದ್ದರೆ, ಆಂಡ್ರಿಯನ್ ಮಾರ್ಡೆರೆ (81.48 ಮೀಟರ್) ಹಾಗೂ ಲಿಥುವೇನಿಯದ ಎಡಿಸ್ ಮ್ಯಾಟುಸೆವಿಶಿಯಸ್ (79.31 ಮೀಟರ್) ನಷ್ಟು ದೂರ ಎಸೆದಿದ್ದು ಚೋಪ್ರಾ ನಂತರದ ಎರಡು ಸ್ಥಾನಗಳನ್ನು ಪಡೆದಿದ್ದಾರೆ.