
ಹರಿಯಾಣ: ಕ್ರೀಡೆಯನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ವೃತ್ತಿ ಹಾಗೂ ಒಪ್ಪಂದದಿಂದ ಗಳಿಸಿದ ಆದಾಯದಲ್ಲಿ 1/3 ಭಾಗವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ಏ. 30 ರದು ಹರಿಯಾಣ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಆದೇಶ ಹೊರಡಿಸಿರುವುದಾಗಿ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹೀಗೆ ಕ್ರೀಡಾಪಟುಗಳು ನೀಡಿದ್ದ ಹಣವನ್ನು ರಾಜ್ಯದಲ್ಲಿ ಕ್ರೀಡಾ ಅಭಿವೃದ್ದಿಗಾಗಿ ಬಳಸಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯಸರ್ಕಾರ ಅಥವಾ ಇನ್ನಿತರ ಯಾವುದೇ ಸರ್ಕಾರದ ಅಧೀನಕೊಳ್ಳಪಟ್ಟ ಸಂಸ್ಥೆಯಲ್ಲಿನ ನೌಕರರು, ವೃತ್ತಿಪರ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವೇತನವಿಲ್ಲದೆ ಅಸಾಧಾರಣ ರಜೆ ನೀಡಲಾಗುವುದು ಎಂದು ಹೇಳಲಾಗಿದೆ.
ಕ್ರೀಡೆ ಮತ್ತು ಯುವ ವ್ಯವಹಾರಗಳ ಇಲಾಖೆಯಿಂದ ನೀಡಲ್ಪಟ್ಟ ಸುತ್ತೂಲೆ ಪ್ರಕಾರ ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಅಥವಾ ವೃತ್ತಿಪರ ಕ್ರೀಡೆ, ಒಡಂಬಡಿಕೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವೇತನವಿಲ್ಲದೆ ಅಸಾಧಾರಣ ರಜೆಗೆ ನೀಡಲಾಗುವುದು ಎಂದು ಹೇಳಲಾಗಿದೆ.
ವೃತ್ತಿಪರ ಕ್ರೀಡೆ ಅಥವಾ ವಾಣಿಜ್ಯ ಒಡಂಬಡಿಕೆಗಳಲ್ಲಿ ಪಾಲ್ಗೊಳ್ಳುವಾಗ, ಸಂಬಂಧಿತ ಪ್ರಾಧಿಕಾರದ ಅನುಮೋದನೆಯೊಂದಿಗೆ ಕ್ರೀಡಾಪಟು ಕರ್ತವ್ಯಕ್ಕೆ ಚಿಕಿತ್ಸೆ ನೀಡಿದರೆ, ಕ್ರೀಡಾಪಟು ಗಳಿಸಿದ ಪೂರ್ಣ ಆದಾಯವನ್ನು ಹರಿಯಾಣ ರಾಜ್ಯ ಕ್ರೀಡಾ ಸಮಿತಿಗೆ ಸಲ್ಲಿಸಬೇಕಾಗುತ್ತದೆ.
ಹರಿಯಾಣದಲ್ಲಿ ಅಸಂಖ್ಯಾತ ಕ್ರೀಡಾಪಟುಗಳಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರತಿನಿಧಿಸಿದ್ದಾರೆ. ಆದಾಗ್ಯೂ, ಆದಾಯದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದು ಹಲವು ಕ್ರೀಡಾಪಟುಗಳಲ್ಲಿ ಅಸಮಾಧಾನ ಮೂಡಿಸಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಸ್ತಿಪಟು ಬಬಿತ ಪೊಗಟ್, ಕ್ರೀಡಾಪಟುಗಳು ಎಷ್ಟು ಶ್ರಮ ಪಡುತ್ತಾರೆ ಅನ್ನೋದನ್ನ ಸರ್ಕಾರ ಅರಿಯಲಿ. ಹೇಗೆ ಆದಾಯ ಕಡಿತಮಾಡಿಕೊಳ್ಳುತ್ತಾರೆ. ನನಂತೂ ಇದನ್ನು ಬೆಂಬಲಿಸುವುದಿಲ್ಲ. ಈ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ನಮ್ಮೊಂದಿಗೆ ಚರ್ಚೆ ನಡೆಸಬೇಕಿತ್ತು ಎಂದು ತಿಳಿಸಿದ್ದಾರೆ.
ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹರಿಯಾಣ ಸರ್ಕಾರ ರದ್ದುಪಡಿಸಿತ್ತು. ಗೊಲ್ಡ್ ಕೋಸ್ಟ್ ನಲ್ಲಿ ಪದಕ ಗಳಿಸಿದವರಿಗೆ ಬಹುಮಾನದ ಮೊತ್ತವನ್ನು ಕೂಡ ಕಡಿತಗೊಳಿಸಲು ಸರ್ಕಾರ ಉದ್ದೇಶಿಸಿತ್ತು.
Advertisement