ಪ್ರಶಸ್ತಿಗೆ ಮುತ್ತಿಕ್ಕುತ್ತಿರುವ ಸಿಮೊನಾ ಹಲೆಪ್
ಕ್ರೀಡೆ
ಫ್ರೆಂಚ್ ಓಪನ್: ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸಿಮೊನಾ ಹಲೆಪ್
ವಿಶ್ವದ ನಂ.1 ಪಟ್ಟವನ್ನು ಉಳಿಸಿಕೊಳ್ಳುವುದರೊಂದಿಗೆ ಫ್ರೆಂಚ್ ಓಪನ್ ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದ ರೊಮೆನಿಯಾದ ಸಿಮೊನಾ ಹಲೆಪ್ ಅವರು ಶನಿವಾರ ಕಡೆಗೂ...
ಪ್ಯಾರಿಸ್: ವಿಶ್ವದ ನಂ.1 ಪಟ್ಟವನ್ನು ಉಳಿಸಿಕೊಳ್ಳುವುದರೊಂದಿಗೆ ಫ್ರೆಂಚ್ ಓಪನ್ ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದ ರೊಮೆನಿಯಾದ ಸಿಮೊನಾ ಹಲೆಪ್ ಅವರು ಶನಿವಾರ ಕಡೆಗೂ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಸಿಮೊನಾ ಹಲೆಪ್ ಅವರು ಅಮೆರಿಕದ ಸ್ಲೋಯೆನ್ ಸ್ಟೀಫನ್ಸ್ ಅವರ ವಿರುದ್ಧ 3-6, 6-4, 6-1 ನೇರ ಸೆಟ್ಗಳಿಂದ ಮಣಿಸುವ ಮೂಲಕ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಹಲೆಪ್ ಅವರು ಗುರುವಾರ ನಡೆದ ಸೆಮಿಫೈನಲ್ ನಲ್ಲಿ 2016ರ ಚಾಂಪಿಯನ್ ಸ್ಪೇನ್ನ ಗಾರ್ಬಿನ್ ಮುಗುರುಜಾರನ್ನು ಮಣಿಸುವ ಮೂಲಕ ಒಂದು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್ಪ್ರವೇಶಿಸಿದ್ದರು.
26 ವರ್ಷದ ರುಮೇನಿಯನ್ ಆಟಗಾರ್ತಿ ಈ ಹಿಂದೆ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಎರಡು ಬಾರಿ ಫೈನಲ್ ಪ್ರವೇಶಿಸಿ ಸೋತಿದ್ದರು. ಈ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದರು. ನಾಲ್ಕನೆೇ ಬಾರಿ ಚೊಚ್ಚಲ ಪ್ರಶಸ್ತಿಯ ಕನಸು ನನಸಾಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ