ವಿಶ್ವದ 2 ನೇ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಭಾರತದ ಬಾಲಕ ಆರ್ ಪ್ರಜ್ಞಾನಂದ

ಚೆನ್ನೈ ಮೂಲದ ಆರ್‌.ಪ್ರಜ್ಞಾನಂದ ಜಗತ್ತಿನ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿ ದಾಖಲೆ ನಿರ್ಮಿಸಿದ್ದಾರೆ.
ಆರ್ ಪ್ರಜ್ಞಾನಂದ
ಆರ್ ಪ್ರಜ್ಞಾನಂದ
ಚೆನ್ನೈ: ಚೆನ್ನೈ ಮೂಲದ ಆರ್‌.ಪ್ರಜ್ಞಾನಂದ ಜಗತ್ತಿನ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿ ದಾಖಲೆ ನಿರ್ಮಿಸಿದ್ದಾರೆ. 
ಕೇವಲ 12 ವರ್ಷ 10 ತಿಂಗಳು 13 ದಿನಗಳ ವಯಸ್ಸಿನವರಾಗಿರುವ ಪ್ರಜ್ಞಾನಂದ ಇಟಾಲಿಯಲ್ಲಿ ನಡೆಯುತ್ತಿರುವ ಜೂ.24 ರಂದು ನಡೆದ ಚೆಸ್‌ ಪಂದ್ಯದಲ್ಲಿ ಲೂಕ ಮೊರೊನಿಯನ್ನು ಎಂಟನೇ ಸುತ್ತಿನಲ್ಲಿ ಪರಾಭವಗೊಳಿಸಿದ. ಒಂಬತ್ತನೇ ಸುತ್ತಿನಲ್ಲಿ 2514 ರೇಟಿಂಗ್‌ನ ನೆದರ್‌ಲ್ಯಾಂಡ್‌ನ ಪ್ರೂಜ್‌ಸರ್ಸ್‌ ರೊಲಾಂಡ್‌ ವಿರುದ್ಧ ಪ್ರಜ್ಞಾನಂದ(2482) ಸಮಬಲ ಸಾಧಿಸಿ ವಿಶ್ವದ 2 ನೇ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಉಕ್ರೇನ್ ನ ಸರ್ಜಿ ಕರ್ಜಕಿನ್‌ 12 ವರ್ಷ 7 ತಿಂಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು ವಿಶ್ವದ ಮೊದಲ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ.  ಪ್ರಜ್ಞಾನಂದ ಸಾಧನೆಗೆ 5 ಬಾರಿ ವಿಶ್ವ ಚಾಂಪಿಯನ್ ಆಗಿರುವ, ದೇಶದ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಪ್ರಜ್ಞಾನಂದ ಅವರಿಗೆ ಅಭಿನಂದನೆ ಸಲ್ಲಿಸಿದ್ದು ಚೆನ್ನೈ ನಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದಾರೆ. 
2016 ರಲ್ಲಿ 10 ವರ್ಶ 10 ತಿಂಗಳು 19 ದಿನಗಳ ವಯಸ್ಸಿನಲ್ಲಿ ಪ್ರಜ್ಞಾನಂದ ಅತಿ ಕಿರಿಯ ಅಂತಾರಾಷ್ಟ್ರೀಯ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com