ರೋಜರ್ ಫೆಡರರ್
ಕ್ರೀಡೆ
ಹ್ಯಾಲೆ ಓಪನ್: ರೋಜರ್ ಫೆಡರರ್ ಗೆ ಸೊಲು, ಅಗ್ರ ಸ್ಥಾನದಿಂದ ಹಿಂದೆ ಸರಿದ ಸ್ವಿಸ್ ಆಟಗಾರ
ಎಟಿಪಿ ಹ್ಯಾಲೆ ಟೆನಿಸ್ ಟೂರ್ನಿಯಲ್ಲಿ 99 ಎಟಿಪಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ರೋಜರ್ ಫೆಡರರ್ ಕನಸಿಗೆ ಬೊರ್ನಾ ಕೊರಿಕ್ ತಣ್ಣೀರು ಎರಚಿದ್ದಾರೆ.
ಹ್ಯಾಲೆ ವೆಸ್ಟ್‌ಫಲೆನ್(ಜರ್ಮನಿ): ಎಟಿಪಿ ಹ್ಯಾಲೆ ಟೆನಿಸ್ ಟೂರ್ನಿಯಲ್ಲಿ 99 ಎಟಿಪಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ರೋಜರ್ ಫೆಡರರ್ ಕನಸಿಗೆ ಬೊರ್ನಾ ಕೊರಿಕ್ ತಣ್ಣೀರು ಎರಚಿದ್ದಾರೆ. ಭಾನುವಾರ ನಡೆದ ಪ್ರತಿಷ್ಠಿತ ಫೈನಲ್ಸ್ ನಲ್ಲಿ ಫೆಡರರ್ 7-6 (8/6), 3-6, 6-2 ಸೆಟ್ ಗಳ ಅಂತರದಿಂದ ಕೋರಿಕ್ ಗೆ ಶರಣಾಗಿದ್ದಾರೆ.
ಇದರೊಡನೆ ರೋಜರ್ ಫೆಡರರ್ ಎಟಿಪಿ ವಿಶ್ವ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಇದೇ ವೇಳೆ ಜರ್ಮನ್ ನೆಲದಲ್ಲಿ ತಮ್ಮ ವೃತ್ತಿಜೀವನದ 10ನೇ ಪ್ರಶಸ್ತಿ ಗೆಲ್ಲುವಲ್ಲಿ ಫೆಡರರ್ ವಿಫಲರಾಗಿದ್ದಾರೆ.
ಸೋತ ಬಳಿಕ ಮಾತನಾಡಿದ ಫೆಡರರ್ "ಗೆಲುವು ಎಂದಿಗೂ ಒಳ್ಳೆಯದು, ಸೋಲು ಎನ್ನುವುದು ನೋವನ್ನು ತರುತ್ತದೆ. ನಾನು ಇಂದಿನ ಪಂದ್ಯ ಈ ವಾರದ ನನ್ನ ಅತ್ಯುತ್ತಮ ಪಂದ್ಯ ಎಂದು ಭಾವಿಸಿದ್ದೆ" ಎಂದಿದ್ದಾರೆ.
"ನಾನು ಕೆಟ್ಟದಾಗಿ ಆಡಲಿಲ್ಲ, ಆದರೆ ಗೆಲುವು ನನ್ನ ಕೈಗೆಟುಕಲಿಲ್ಲ ಇದು ದುರದೃಷ್ಟಕರವಾಗಿದೆ. ನಾನೇನೂ ತಲೆ ಬಗ್ಗಿಸುವುದಿಲ್ಲ, ಸ್ಟಟ್‌ಗಾರ್ಟ್ ಹಾಗೂ ಹ್ಯಾಲೆನಡುವೆ ನಾನು ಉತ್ತಮ ಪ್ರದರ್ಶ್ನ ಹೊಂದಿದ್ದೇನೆ." ಎಂದಿದ್ದಾರೆ.
ಇದೇ ವೇಳೆ ಪಂದ್ಯದ ವಿಜೇತರಾದ ಕ್ರೊಯೇಷಿಯಾದ ಬೊರ್ನಾ ಕೊರಿಕ್ 34 ಶ್ರೇಯಾಂಕದ ಆಟಗಾರನಾಗಿದ್ದಾರೆ.
ಕಳೆದ ವಾರ ಸ್ಟಟ್‌ಗಾರ್ಟ್‌ನಡೆದ ಸ್ಟಟ್‌ಗಾರ್ಟ್ ಓಪನ್ ಮರ್ಸಿಡೀಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 98ನೇ ಎಟಿಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ