ಬೆಶ್ ಕೆಕ್(ಕಿರ್ಗಿಸ್ಥಾನ): ಕಿರ್ಗಿಸ್ಥಾನದ ಬಿಶ್ ಕೆಕ್ ನಲ್ಲಿ ನಡೆಯುತ್ತಿರುವ ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವಿನೇಶ್ ಪೋಗಟ್ ಬೆಳ್ಳಿ ಪದಕ ಗಳಿಸಿದ್ದಾರೆ.
ಮಹಿಳೆಯರ 50 ಕೆಜಿ (ಫ್ರೀ ಸ್ಟೈಲ್) ವಿಭಾಗದಲ್ಲಿ ಪೋಗಟ್ ಚೀನಾದ ಚುನ್ ಲೀ ಅವರ ವಿರುದ್ಧ ನಡೆದ ಅಂತಿಮ ಸುತ್ತಿನ ಹೋರಾಟದಲ್ಲಿ 3-2ರ ಅಂತರದಲ್ಲಿ ಪರಾಭವಗೊಂಡರು.
ಪಂದ್ಯದ ಪ್ರಾರಂಭದಲ್ಲಿ 0-1 ಅಂತರದಲ್ಲಿ ಹಿನ್ನಡೆ ಆನುಭವಿಸಿದ್ದ ಪೋಗಟ್ ನಂತರ ಸುತ್ತುಗಳಲ್ಲಿ ಉತ್ತಮ ಸ್ಪರ್ಧೆ ಒಡ್ಡಿದ್ದರು.ಆದರೆ ಚೀನಾ ಕುಸ್ತಿಪಟು ಲೀ ತಾನು ಕಡೆಯವರೆಗೆ ಪ್ರಬಲ ಪೈಪೋಟಿ ನೀಡಿದ್ದಲ್ಲದೆ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
2014ರ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಪೋಗಟ್ ಅವರು ಸೆಮಿ ಫೈನಲ್ಸ್ ಹಂತದಲ್ಲಿ ಜಪಾನ್ ನ ಯೂಕಿ ಇರಿ ಅವರನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದ್ದರು.
ಸಂಗೀತಾಗೆ ಕಂಚು
ಭಾರತದ ಇನ್ನೋರ್ವ ಕುಸ್ತಿ ಪಟು ಸಂಗೀತಾ 59 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಸಂಗೀತಾ ಅವರು ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಉಜ್ರೇಕಿ ಸ್ಥಾನದ ನಬಿರಾ ಎಸೆನ್ ಬಾಯಿವಾ ಅವರ ವಿರುದ್ಧ ಸೆಣೆಸಿದ್ದು 5-15 ಅಂತರದಿಂದ ಪರಾಭವಗೊಂಡಿದ್ದರು.
ಭಾರತದ ಪರವಾಗಿ ವಿನೇಶ್ ಹಾಗೂ ಸಂಗೀತಾ ಅವರುಗಳು ಇಂದು ಒಂದೊಂದು ಪದಕ ಗೆದ್ದಿದ್ದು ಕ್ರೀಡಾಕೂಟದಲ್ಲಿ ಭಾರತ ಇದುವರೆಗೆನಾಲ್ಕು ಪದಕಗಳ ಗೆದ್ದು ಸಾಧನೆ ಮಾಡಿದೆ.