ಮೆಕ್ಸಿಕೋ ಸಿಟಿ: ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಯುವ ಮಹಿಳಾ ಶೂಟರ್ ಮನು ಭಾಕರ್ ಚಿನ್ನದ ಪದಕ ಗಳಿಸಿದ್ದಾರೆ..ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್ಎಸ್ಎಫ್) ಆಯೋಜಿಸಿರುವ ಈ ವಿಶ್ವಕಪ್ ನಲ್ಲಿ ಮಹಿಳೆಯರ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಈ ಸಾಧನೆ ಮಾಡಿದ್ದಾರೆ..ಅತಿಥೇಯ ರಾಷ್ಟ್ರವಾದ ಮೆಕ್ಸಿಕೋದ ಅಲೆಜಾಂಡ್ರ ಝಾವಲಾ ಅವರನ್ನು ಮಣಿಸಿ ಮನು ಬಂಗಾರದ ಪದಕ ಗೆದ್ದಿದ್ದು ಒಟ್ಟು 237.5 ಅಂಕಗಳೊಂದಿಗೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ..ಕ್ರೀಡಾಕೂಟದ ಎರದನೇ ದಿನ ಭಾರತದ ಇನ್ನೋರ್ವ ಶೂಟರ್ ರವಿ ಕುಮಾರ್ ಕಂಚಿನ ಪದಕ ಗಳಿಸಿದ್ದು ಕೂಟದಲ್ಲಿ ಇದುವರೆಗೆ ಭಾರತ ಐದು ಪದಕಗಳನ್ನು ತನ್ನದಾಗಿಸಿಕೊಂಡಿದೆ..ಶಹಜಾರ್ ರಿಜ್ವಿ, ಮನು ಭಾಕರ್ ಚಿನ್ನ ಗೆದ್ದಿದ್ದು ರವಿಕುಮಾರ್, ಜೀತು ರಾಯ್ ಮತ್ತು ಮೆಹುಲಿ ಘೋಷ್ ತಲಾ ಒಂದೊಂದು ಕಂಚಿನ ಪದಕಗಳನ್ನು ಗಳಿಸಿದ್ದಾರೆ. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos