9ನೇ ತರಗತಿಯಿಂದ ದೈಹಿಕ ಶಿಕ್ಷಣ ಕಡ್ಡಾಯ: ಸಿಬಿಎಸ್ ಇ ನಿರ್ಧಾರಕ್ಕೆ ಸಚಿನ್ ಬೆಂಬಲ

9ನೇ ತರಗತಿಯಿಂದ ೧೨ನೇ ತರಗತಿಯ ಎಲ್ಲಾ ಮಕ್ಕಳು ಪ್ರತಿದಿನ ಆರೋಗ್ಯ ಮತ್ತು ದೈಹಿಕ ಶಿಕ್ಷಣ ತರಗತಿಗಳಲ್ಲಿ ಹಾಜರಿರುವುದನ್ನುಕೇಂದ್ರಿಯ ಪ್ರೌಢ ಶಿಕ್ಷಣ....
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ನವದೆಹಲಿ: 9ನೇ ತರಗತಿಯಿಂದ ೧೨ನೇ ತರಗತಿಯ ಎಲ್ಲಾ ಮಕ್ಕಳು ಪ್ರತಿದಿನ ಆರೋಗ್ಯ ಮತ್ತು ದೈಹಿಕ ಶಿಕ್ಷಣ ತರಗತಿಗಳಲ್ಲಿ ಹಾಜರಿರುವುದನ್ನುಕೇಂದ್ರಿಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ) ಕಡ್ಡಾಯಗೊಳಿಸಿದ್ದು, ಇದಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಕೆಳ ಹಂತದ ತರಗತಿಗಳಲ್ಲೂ ದೈಹಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಿಬಿಎಸ್ ಇ ಮುಖ್ಯಸ್ಥೆ ಅನಿತಾ ಕರ್ವಾಲ್ ಅವರಿಗೆ ಪತ್ರ ಬರೆದಿರುವ ತೆಂಡೂಲ್ಕರ್, ಕ್ರೀಡಾ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಬಹಳ ದಿನಗಳ ಹಿಂದೆಯೇ ಕ್ರೀಡಾ ಶಿಕ್ಷಣವನ್ನು ಪಠ್ಯದಲ್ಲಿ ಸೇರಿಸಬೇಕಾಗಿತ್ತು. ಈಗ ಅದನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ತಡೆಗಟ್ಟುವ ನಿಟ್ಟಿನಲ್ಲಿ ಸಿಬಿಎಸ್ ಇ ಈ ವರ್ಷದಿಂದ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಕಡ್ಡಾಯಗೊಳಿಸಿದ್ದು, ಇದು ಗ್ರೇಡ್ ಪಡೆಯಲು ಅರ್ಹತಾ ವಿಷಯವಾಗಿದೆ ಮತ್ತು ಹತ್ತನೇ ತರಗತಿ ಹಾಗೂ ೧೨ನೇ ತರಗತಿಯ ಮಂಡಳಿಯ ಪರೀಕ್ಷೆಗೆ ಹಾಜರಾಗಲು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com