ಭಾರತ ಹೆಮ್ಮೆಯ ಶೂಟರ್ ಅಭಿನವ್ ಬಿಂದ್ರಾಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ!

ಭಾರತೀಯ ಶೂಟರ್ ಅಭಿನವ್ ಬಿಂದ್ರಾ ಮತ್ತೊಮ್ಮೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಬಿಂದ್ರಾ ಅವರಿಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ " ದಿ ಬ್ಲೂ ಕ್ರಾಸ್" ಪುರಸ್ಕಾರ ಲಭಿಸಿದೆ.
ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ
Updated on
ನವದೆಹಲಿ: ಭಾರತೀಯ ಶೂಟರ್ ಅಭಿನವ್ ಬಿಂದ್ರಾ ಮತ್ತೊಮ್ಮೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಬಿಂದ್ರಾ ಅವರಿಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ " ದಿ ಬ್ಲೂ ಕ್ರಾಸ್" ಪುರಸ್ಕಾರ ಲಭಿಸಿದೆ.
ಬ್ಲೂ ಕ್ರಾಸ್ ಪ್ರಶಸ್ತಿಯು ಅಂತರಾಷ್ಟ್ರೀಯ ಶೂಟಿಂಗ್ ಫೆಡರೇಷನ್ (ಐಎಸ್ಎಸ್ಎಫ್) ನೀಡುವ ಅತ್ಯುನ್ನತ ಗೌರವವಾಗಿದ್ದು ಇದನ್ನು ಪಡೆದ ಭಾರತದ ಮೊದಲ ಶೂಟರ್ ಎಂಬ ಖ್ಯಾತಿ ಅಭಿನವ್ ಬಿಂದ್ರಾ ಅವರದಾಗಿದೆ.
ಶೂಟಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾ ಸಂಸ್ಥೆಯ ಸದಸ್ಯರಿಗೆ ಈ ಪುರಸ್ಕಾರ ನೀಡಲಾಗುತ್ತದೆ.ಒಲಂಪಿಕ್ ಶೂಟಿಂಗ್ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಭಾರತೀಯರಾಗಿರುವ ಬಿಂದ್ರಾ "ಮ್ಯೂನಿಚ್ ನಲ್ಲಿ ನಡೆಯುವ ಸಮಾರಂಭದಲ್ಲಿ ಶೂಟಿಂಗ್ ಗಾಗಿನ ಅತ್ಯುನ್ನತ ಪ್ರಶಸ್ತಿ ಬ್ಲೂ ಕ್ರಾಸ್ ಸ್ವೀಕರಿಸಲು ನನಗೆ ಅತ್ಯಂತ ಆನಂದವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Extremely humbled to receive the @ISSF_Shooting ‘s highest honour the Blue Cross at the General Assembly in Munich today. pic.twitter.com/pNNgQWxT5L

— Abhinav Bindra OLY (@Abhinav_Bindra) 30 November 2018
2008ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ  10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಬಿಂದ್ರಾ ಈ ಸಾಧನೆ ಮಾಡಿದ ಏಕೈಕ ಭಾರತೀಯ ಶೂಟರ್ ಆಗಿದ್ದಾರೆ. ಅಲ್ಲದೆ ಏಳು ಕಾಮನ್‌ವೆಲ್ತ್ ಗೇಮ್ಸ್ ಪದಕ, ಮೂರು ಏಷ್ಯನ್ ಗೇಮ್ಸ್ ಪದಕ ಹಾಗೂ 2006ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕವನ್ನೂ ಗಳಿಸಿರುವ ಬಿಂದ್ರಾ ಭಾರತೀಯ ಶೂಟಿಂಗ್ ದ್ರುವತಾರೆ ಎಂದರೆ ತಪ್ಪಲ್ಲ.
ಅಭಿನವ್ ಬಿಂದ್ರಾ ಸಾಧನೆಗೆ ಗೌರವವಾಗಿ ಇದಕ್ಕೆ ಮುನ್ನ 2000ರಲ್ಲಿ ಅರ್ಜುನ ಪ್ರಶಸ್ತಿ, 2001ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ 2009ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳು ಸಂದಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com