ಹಾಕಿ ದಂತಕಥೆ ಬಲ್ವೀರ್ ಸಿಂಗ್ ಆರೋಗ್ಯ ಗಂಭೀರ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಭಾರತೀಯ ಹಾಕಿ ದಂತಕಥೆ ಬಲ್ವೀರ್ ಸಿಂಗ್ ಸೀನಿಯರ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಂಡಿಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಕಲಿಸಲಾಗಿದೆ.
ಬಲ್ವೀರ್ ಸಿಂಗ್
ಬಲ್ವೀರ್ ಸಿಂಗ್
ಚಂಡೀಗಢ: ಭಾರತೀಯ ಹಾಕಿ ದಂತಕಥೆ ಬಲ್ವೀರ್ ಸಿಂಗ್ ಸೀನಿಯರ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಂಡಿಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಕಲಿಸಲಾಗಿದೆ.  ಬಲ್ವೀರ್ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನಿಡಲಾಗುತ್ತಿದೆ.
93ರ ಹರೆಯದ ಬಲ್ವೀರ್ ಅಕ್ಟೋಬರ್ 1ರಿಂದಲೂ ಆಸ್ಪತ್ರೆಯಲ್ಲಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
"ಸಿಂಗ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೃದಯ ಬಡಿತ ನಿಧಾನವಾಗಿದೆ.ರಕ್ತದ ಒತ್ತಡ ಸಹ ಕಡಿಮೆಯಾಗಿದೆ" ವೈದ್ಯರು ಮಾಹಿತಿ ನೀಡಿದ್ದಾರೆ.
ಬಲ್ವೀರ್ ಸಿಂಗ್ 1948,.1952, ಹಾಗೂ 1956ರಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದ ಹಾಕಿ ತಂಡದ ಸದಸ್ಯರಾಗಿದ್ದರು. ಅದರಲ್ಲಿಯೂ 1948ರ ಲಂಡನ್ ಒಲಂಪಿಕ್ಸ್ ನಲ್ಲಿ ನಡೆದ ಹಾಕಿ ಫೈನಲ್ ಹಣಾಹಣಿಯಲ್ಲಿ ಭಾರತದ ಪರ ಎರಡು ಗೋಲ್ ದಾಖಲಿಸಿದ್ದರು.
1956ರ ಒಲಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕರಾಗಿದ್ದ ಬಲ್ವೀರ್ ಸಿಮ್ಗ್ ಚಿನ್ನದ ಪದಕ ಗಳಿಸಿಕೊಟ್ಟಿದ್ದರು. ಇವರು 1975ರಲ್ಲಿ ವಿಶ್ವಕಪ್ ಗೆದ್ದ ಭಾರತ ಹಾಕಿ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.
ಹಿರಿಯ ಹಾಕಿ ಆಟಗಾರ ಬಲ್ವೀರ್ ಹಾಕಿ ಮಾಂತ್ರಿಕ ದ್ಯಾನ್ ಚಂದ್ ಅವರೊಡನೆ ಆಟವಾಡಿದ್ದರು. ಇವರಿಗೆ 1957ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com