ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟ #MeToo: ಮಾನಸಿಕ ಕಿರುಕುಳವನ್ನು ಬಿಚ್ಚಿಟ್ಟ ಜ್ವಾಲಾ ಗುಟ್ಟಾ

ದಿನ ದಿನಕ್ಕೆ ಹೊಸ ಸಂಚಲನ ಸೃಷ್ಟಿಸುತ್ತಿರುವ "ಮೀಟೂ" ಅಭಿಯಾನಕ್ಕೆ ಇದೀಗ ಕ್ರಿಡಾ ತಾರೆಗಳು ಸಹ ಸೇರ್ಪಡೆಯಾಗಿದ್ದಾರೆ. ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ.....
ಜ್ವಾಲಾ ಗುಟ್ಟಾ
ಜ್ವಾಲಾ ಗುಟ್ಟಾ
ಹೈದರಾಬಾದ್: ದಿನ ದಿನಕ್ಕೆ ಹೊಸ ಸಂಚಲನ ಸೃಷ್ಟಿಸುತ್ತಿರುವ "ಮೀಟೂ" ಅಭಿಯಾನಕ್ಕೆ ಇದೀಗ ಕ್ರಿಡಾ ತಾರೆಗಳು ಸಹ ಸೇರ್ಪಡೆಯಾಗಿದ್ದಾರೆ.  ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಮಗಾದ ಮಾನಸಿಕ ಕಿರುಕುಳದ ಅನುಭವವನ್ನು "ಮೀ ಟೂ" ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಜ್ವಾಲಾ "ನಾನು ಸ್ಥಿರ ಪ್ರದರ್ಶನ ನೀಡಿದ ಹೊರತಾಗಿಯೂ ಆಯ್ಕೆ ಸಮಿತಿ ನನ್ನ ಪಾಲಿಗೆ ತಾರತಮ್ಯ ನೀತಿಯನ್ನು ಅನುಸರಿಸಿದ್ದು ಈ ಪರಿಣಾಮ ನಾನು ಬೇಗನೇ ನಿವೃತ್ತಿಯಾಗಬೇಕಾಗಿ ಬಂದಿತು" ಎಂದಿದ್ದಾರೆ.
"ನಾನು ಮೀಟೂ ಮೂಲಕ ನನಗಾದ ಮಾನಸಿಕ ಯಾತನೆಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ, ಆತ 2006ರಿಂದ ಮುಖ್ಯ ತರಬೇತುದಾರನಾಗಿದ್ದಾನೆ. ಆತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ನನ್ನನ್ನು ತಂಡದಿಂದ ದೂರವಿಟ್ಟಿದ್ದಾನೆ. ರಿಯೋ ಒಲಂಪಿಕ್ಸ್ ಸೇರಿದಂತೆ ಅನೇಕ ಕ್ರೀಡೆಯಗಳ ಆಯ್ಕೆಯಲ್ಲಿ ಉತ್ತೀರ್ಣಳಾಗಿಯೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು. 
"2006 ರಿಂದ 2016 ರವರೆಗೆ ... ಮತ್ತೆ ಮತ್ತೆ ತಂಡದಿಂದ ನನ್ನನ್ನು ಕೈಬಿಡಲಾಗಿದೆ. ವಿಶ್ವ ನಂ.9ನೇ ಸ್ಥಾನಿಯಾಗಿ ನಾನು ತಂಡಕ್ಕೆ ಮರಳಿದಾಗಲೂ ಆತ ನನ್ನ ಪೋಷಕರಿಗೆ ಬೆದರಿಕೆ ಹಾಕಿದ್ದ. ನನಗೆ ಕಿರುಕುಳ ನಿಡಿದ್ದ, ಎಲ್ಲಾ ವಿಧದಲ್ಲಿ ನನ್ನನ್ನು ಏಕಾಂಗಿಯಾಗಿಸಿದ್ದ" ಜ್ವಾಲಾ ವಿವರಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಜ್ವಾಲಾ ಗುಟ್ಟಾತಮ್ಮ ಟ್ವೀಟ್ ನಲ್ಲಿ ಯಾರೊಬ್ಬರ ಹೆಸರು ಹೇಳದೆ ಹೋದರೂ ಅವರ ಮುಖ್ಯ ತರಬೇತುದಾರರಾಗಿದ್ದ ಗೋಪಿಚಂದ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆನ್ನುವುದು ಸ್ಪಷ್ಟವಿದೆ. ಜ್ವಾಲಾ ದೆಹಲಿಯ 2010 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಸೇರಿ ತನ್ನ ವೃತ್ತಿಜೀವನದಲ್ಲಿ ನಾಲ್ಕು ಕಾಮನ್ವೆಲ್ತ್ ಗೇಮ್ಸ್ ಪದಕಗಳನ್ನು ಜಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com