ಏಷ್ಯನ್ ಪ್ಯಾರಾ ಗೇಮ್ಸ್ : ಚೆಸ್ ನಲ್ಲಿ ಕರ್ನಾಟಕದ ಕಿಶನ್ ಗಂಗೊಳ್ಳಿ ಬಂಗಾರದ ಸಾಧನೆ

ಇಂಡೋನೇಷ್ಯಾದ ಜಕಾರ್ತನದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಭೇಟಿ ಮುಂದುವರೆದಿದೆ.
ಕಿಶನ್ ಗಂಗೊಳ್ಳಿ
ಕಿಶನ್ ಗಂಗೊಳ್ಳಿ

ಜಕಾರ್ತ : ಇಂಡೋನೇಷ್ಯಾದ ಜಕಾರ್ತನದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಭೇಟಿ ಮುಂದುವರೆದಿದೆ.

ನಿನ್ನೆ ನಡೆದ ಸ್ಪರ್ಧೆಗಳಲ್ಲಿ ಭಾರತ ಚೆಸ್ ಮತ್ತು ಬ್ಮಾಡ್ಮಿಂಟನ್ ವಿಭಾಗಗಳಲ್ಲಿ ಸ್ವರ್ಣ ಸಾಧನೆ ಮಾಡಿದರೆ, ಪ್ಯಾರಾಲಿಂಪಿಕ್ ಪದಕ ವಿಜೇತೆ ದೀಪಾ ಮಲಿಕ್ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಕರ್ನಾಟಕದ ಕಿಶನ್ ಗಂಗೊಳ್ಳಿ ಪುರುಷರ ವೈಯಕ್ತಿಕ ರಾಪಿಡ್ 4-ಬಿ/2  ಬಿ/3  ವಿಭಾಗದಲ್ಲಿ ಮೊದಲ ಸ್ಥಾನ ಅಲಂಕರಿಸುವ ಮೂಲಕ ಸ್ವರ್ಣ ಗೌರವಕ್ಕೆ ಭಾಜನರಾಗಿದ್ದಾರೆ.  ಐದು ಬಾರಿಯ ರಾಷ್ಟ್ರೀಯ ಚಾಂಪಿಯನ್ ಹಾಗೂ ಹಾಲಿ ಏಷ್ಯನ್ ಚಾಂಪಿಯನ್ ಕಿಶನ್ ಶೇ. 75 ರಷ್ಟು  ದೃಷ್ಟಿಮಾಂದ್ಯರಾಗಿದ್ದು, ಎರಡು ಬಾರಿ ಒಲಿಂಪಿಯಾಡ್ ಪದಕ ವಿಜೇತರಾಗಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಎಸ್ ಎಲ್ 3 ಸ್ಪರ್ಧೆಯ ಪಾರಾ ಬ್ಯಾಡ್ಮಿಂಟನ್  ವಿಭಾಗದಲ್ಲಿ ಭಾರತದ  ಪಾರುಲ್ ಪರ್ಮರ್ ಫೈನಲ್ ಹಣಾಹಣಿಯಲ್ಲಿ 21-9, 21-5 ನೇರ ಗೇಮ್ ಗಳಿಂದ ಥಾಯ್ಲೆಂಡಿನ ವಾಂಡೀ  ಕಮ್ತಾಮ್ ವಿರುದ್ಧ ಗೆದ್ದು ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com