ಸೋತರೂ ಬಜರಂಗ್ ಪುನಿಯಾ ದಾಖಲೆ: ವಿಶ್ವ ಕುಸ್ತಿಯಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ!

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ್ದ ಭಾರತ ಕುಸ್ತಿ ಪಟು ಬಜರಂಗ್ ಪುನಿಯಾ ಜಪಾನಿನ ಯುವ ಸ್ಪರ್ಧಿ ತಕುಟೊ ಒಟುಗೊರೆ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ...
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ
ಬುಡಾಪೆಸ್ಟ್(ಹಂಗೇರಿ): ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ್ದ ಭಾರತ ಕುಸ್ತಿ ಪಟು ಬಜರಂಗ್ ಪುನಿಯಾ ಜಪಾನಿನ ಯುವ ಸ್ಪರ್ಧಿ ತಕುಟೊ ಒಟುಗೊರೆ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. 
ಪುನಿಯಾ 65 ಕೆಜಿ ವಿಭಾಗದ ಫ್ರೀ ಸ್ಟೈಲ್ ನಲ್ಲಿ 9-16 ಅಂಕಗಳಿಂದ ಸೋತರೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪುನಿಯಾ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. 
2013ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಪುನಿಯಾ ಇದೀಗ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇನ್ನು 2010ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸುಶೀಲ್ ಕುಮಾರ್ ಚಿನ್ನ ಗೆದ್ದಿದ್ದರು. ಸುಶೀಲ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಹಾಗೂ ಕಂಚು ಗೆದ್ದ ಭಾರತದ ಏಕೈಕ ಸ್ಪರ್ಧಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com