ಯುಎಸ್ ಓಪನ್: ನಾಲ್ಕರ ಘಟ್ಟಕ್ಕೇರಿದ ನಡಾಲ್, ಸೆಮೀಸ್ ಗೆ ಸೆರೆನಾ ಲಗ್ಗೆ

ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಸೆಮಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.
ರಾಫೆಲ್ ನಡಾಲ್ ಮತ್ತು ಸೆರೆನಾ ವಿಲಿಯಮ್ಸ್
ರಾಫೆಲ್ ನಡಾಲ್ ಮತ್ತು ಸೆರೆನಾ ವಿಲಿಯಮ್ಸ್
ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಸೆಮಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.
ಪುರುಷ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ನಡಾಲ್  ಆಸ್ಟ್ರೀಯಾದ ಡೊಮಿನಿಕ್ ಥೀಮ್ ವಿರುದ್ಧ 0-6, 6-4, 7-5, 6-7 (4), 7-6 (5) ಅಂತರದ ಜಯ ದಾಖಲಿಸಿದ್ದಾರೆ.
4 ಗಂಟೆ 49 ನಿಮಿಷಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ನಡಾಲ್ ಜಯಿಸುವುದರೊಡನೆ ಪಂದ್ಯಾವಳಿಯಲ್ಲಿ ತನ್ನ 12 ನೇ ಬಾರಿಗೆ ಕ್ವಾರ್ಟರ್ ಫೈನಲ್ಸ್ ಜಯಿಸಿದ್ದಾರೆ.
ಒಂದು ವೇಳೆ ಈ ಪಂದ್ಯಾವಳಿಯಲ್ಲಿ ನಡಾಲ್ ವಿಜಯಿಯಾದಲ್ಲಿ 4ನೇ ಯುಎಸ್ ಓಪನ್ ಹಾಗೂ ಒಟ್ಟಾರೆ 18ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಅವರ ಮುಡಿಗೇರಲಿದೆ.
ಸೆಮೀಸ್ ಪ್ರವೇಶಿಸಿದ ಸೆರೇನಾ
ಮಹಿಳಾ ವಿಭಾಗದಲ್ಲಿ ಅಮೆರಿಕಾದ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್  ಝೆಕ್ ಗಣರಾಜ್ಯದ ಕರೋಲಿನಾ ಪ್ರಿಸ್ಕೊವಾ ಅವರನ್ನು 6-4, 6-3 ಸೆಟ್ ಗಳಿಂದ ಸೋಲಿಸಿ ಸೆಮಿ-ಫೈನಲ್ ಪ್ರವೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com