ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಅತ್ಯಾಚಾರ ಆರೋಪ!

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ದ ಅಮೆರಿಕನ್​ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ....
ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ
Updated on
ಲಿಸ್ಬನ್: ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ  ವಿರುದ್ದ ಅಮೆರಿಕನ್​ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.
2009ರಲ್ಲಿ ಅಮೆರಿಕಾದ ಲಾಸ್​ ವೇಗಸ್​ ಹೋಟೆಲ್​ನಲ್ಲಿ ತನ್ನ ಮೇಲೆ ರೊನಾಲ್ಡೊ ಅತ್ಯಾಚಾರವೆಸಗಿದ್ದಾರೆ. ರೇಪ್​ ಬಗ್ಗೆ ಬಾಯ್ಬಿಡದಂತೆ 3,75,00 ಡಾಲರ್​​ ಹಣವನ್ನು ನೀಡಿದ್ದಾರೆ ಎಂದು ಸಂತ್ರಸ್ಥೆ ಜರ್ಮನ್​ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರೊನಾಲ್ಡೊ 2009ರಲ್ಲಿ  ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯ ಈ ಹೇಳಿಕೆಯನ್ನು ಜರ್ಮನ್​ ಮ್ಯಾಗಜೀನ್​ ಪ್ರಕಟಿಸಿತ್ತು. ರೊನಾಲ್ಡೋ ಪರ ವಕೀಲರೂ ಇಂತಹ ವರದಿ ಪ್ರಕಟಿಸಿರುವ ಪತ್ರಿಕೆಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಇನ್ನು ತಮ್ಮ ವಿರುದ್ಧ ಮೊಕದ್ದಮೆ ಹೂಡಿರುವ ರೊನಬಾಲ್ಡೊ ವಕೀಲರ ಕುರಿತಾಗಿ ಪ್ರತಿಕ್ರಿಯಿಸಿರುವ ಮ್ಯಾಗಜೀನ್​ ಸಂಪಾದಕರು "ಈ ವರದಿಯನ್ನು ಪ್ರಕಟಿಸುವುದಕ್ಕೂ ಮೊದಲು ನಾವು ಹಲವಾರು ಬಾರಿ ರೊನಾಲ್ಡೊ ಹಾಗೂ ಅವರ ನಿರ್ವಹಣಾಧಿಕಾರಿಯನ್ನು ಸಂಪರ್ಕಿಸಲು ಯತ್ನಿಸಿದೆವು. ಈ ಕುರಿತಾಗಿ ಅವರಿಗೆ ಲಿಖಿತ ರೂಪದಲ್ಲೂ ಮಾಹಿತಿ ನೀಡಿದ್ದೆವು ಎಂದು ಹೇಳಿದ್ದಾರೆ.
ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ  ವಿರುದ್ದ ಅಮೆರಿಕನ್​ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com