ಅರ್ಚರಿ ವಿಶ್ವಕಪ್ ಫೈನಲ್ಸ್ : ದೀಪಿಕಾ ಕುಮಾರಿಗೆ ಕಂಚಿನ ಪದಕ !

ಅರ್ಚರಿ ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿಯ ಲಿನಾ ಉನ್ರಾ ರನ್ನು ಸೋಲಿಸಿದ ಭಾರತದ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ದೀಪಿಕಾ ಕುಮಾರಿ
ದೀಪಿಕಾ ಕುಮಾರಿ
Updated on
ಸ್ಯಾಮ್ ಸನ್ :ಅರ್ಚರಿ ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿಯ ಲಿನಾ ಉನ್ರಾ ರನ್ನು ಸೋಲಿಸಿದ ಭಾರತದ ದೀಪಿಕಾ ಕುಮಾರಿ  ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಕೊನೆಯ ಹಂತದಲ್ಲಿ  ಇಬ್ಬರು ಆಟಗಾರರು 5-5 ಸೆಟ್ ಗಳಿಂದ ಪಂದ್ಯ ಟೈ ಆದ ಕಾರಣ ಶೂಟ್ ಅಪ್ ಅಗತ್ಯವಾಗಿತ್ತು. ಕುಮಾರಿ ಮತ್ತು ಉನ್ರಾ ಇಬ್ಬರು 9 ಶೂಟ್ ಗಳನ್ನು ಪಡೆದರು. ಆದರೆ, ಕುಮಾರಿ   ಬಿಟ್ಟ ಬಾಣ ಕೇಂದ್ರದ ಸಮೀಪದಲ್ಲಿ ಬಿದ್ದರಿಂದ ಕಂಚಿನ ಪದಕ  ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದು  ವಿಶ್ವಕಪ್ ಪೈನಲ್ಸ್ ಪಂದ್ಯದಲ್ಲಿ ಕುಮಾರಿ ಪಡೆದಿರುವ ಐದನೇ ಪ್ರಶಸ್ತಿಯಾಗಿದೆ.
ಐದನೇ ಸೆಟ್ ನಲ್ಲಿ ಉಭಯ ಆಟಗಾರರ ತೀವ್ರ  ಪೈಪೋಟಿಯಿಂದ ಪಂದ್ಯ ಡ್ರಾನತ್ತ ಸಾಗಿತ್ತು. ಆದರೆ. ತರಬೇತಿದಾರರ ಅನುಪಸ್ಥಿತಿಯಲ್ಲಿ ದೀಪಿಕಾ ಕುಮಾರಿ ಪ್ರಬಲ ಆಟ ಪ್ರದರ್ಶಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com