ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್: ಪ್ರಣಯ್ ಗೆ ನಿರಾಸೆ

ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. 
ಪ್ರಣಯ್
ಪ್ರಣಯ್

ಬಾಸೆಲ್: ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. 

ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ 19-21, 12-21 ರಿಂದ ಜಪಾನ್ ನ ಕೆಂಟೊ ಮೊಮೊಟೊ ವಿರುದ್ಧ ಎರಡು ನೇರ ಸೆಟ್ ಗಳಲ್ಲಿ ಪರಾಜಯಹೊಂದಿದರು. ಪ್ರಣಯ್ ಇದೇ ಆಟಗಾರನ ವಿರುದ್ಧ ಆರು ಬಾರಿ ಮುಖಾಮುಖಿಯಾಗಿದ್ದು, ಆರರಲ್ಲೂ ಸೋಲು ಕಂಡಿದ್ದಾರೆ. 

ಮೊದಲ ಗೇಮ್ ನ ಆರಂಭದಲ್ಲಿ 3-3 ಅಂಕಗಳಿಂದ ಸಮಬಲ ಸಾಧಿಸಿದ್ದ ಪ್ರಣಯ್, ನಂತರ ಕೊಂಚ ಹಿನ್ನಡೆ ಅನುಭವಿಸಿದರು. ಬಳಿಕ ಭರ್ಜರಿ ಪ್ರದರ್ಶನ ನೀಡಿದ ಅವರು, 12-12 ಹಾಗೂ 14-14 ರಿಂದ ಸಮಬಲ ಸಾಧಿಸಿ ಎದುರಾಳಿಗೆ ಶಾಕ್ ನೀಡಿದರು. ಆದರೆ, ಕೊನೆಯಲ್ಲಿ ಜಪಾನ್ ಆಟಗಾರ ಅಮೋಘವಾಗಿ ಆಡಿ ಜಯ ಸಾಧಿಸಿದರು. ಎರಡನೇ ಹಾಗೂ ನಿರ್ಣಾಯಕ ಗೇಮ್ ನಲ್ಲೂ ಪ್ರಣಯ್ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com