ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ 

 ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದ ಮೂರು ಡಬಲ್‌ಸ್‌ ಸ್ಪರ್ಧೆಯಲ್ಲಿ ಭಾರತ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ
ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ 2 ಚಿನ್ನ, 1 ಬೆಳ್ಳಿ
Updated on


ಕಠ್ಮಂಡು: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದ ಮೂರು ಡಬಲ್‌ಸ್‌ ಸ್ಪರ್ಧೆಯಲ್ಲಿ ಭಾರತ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ. ಮಂಗಳವಾರ ಮೂರು ಚಿನ್ನ ಗೆದ್ದಿದ್ದ ಭಾರತ, ಬುಧವಾರ ಒಟ್ಟಾರೆ ಐದು ಸ್ವರ್ಣ ಪದಕ ಹಾಗೂ ಮೂರು ಬೆಳ್ಳಿ ಸೇರಿದಂತೆ ಒಟ್ಟು ಒಂಬತ್ತು ಪದಕ ಪಡೆದುಕೊಂಡಿದೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಮತ್ತು ಆ್ಯಂಥೋನಿ ಅಮಲ್‌ರಾಜ್ ಜೋಡಿ 8-11, 11-7, 11-7, 11-5, 8-11. 12-10 ಅಂತರದಲ್ಲಿ ಸನಿಲ್ ಶೆಟ್ಟಿ ಮತ್ತು ಸುಧಾಂಶು ಗ್ರೋೋವರ್ ಜೋಡಿಯನ್ನು ಮಣಿಸಿ ಚಿನ್ನ ಮುಡಿಗೇರಿಸಿಕೊಂಡಿತು. ಇನ್ನು ಮಹಿಳೆಯರ ಡಬಲ್‌ಸ್‌ ವಿಭಾಗದಲ್ಲಿ ಮಾಧುರಿಕಾ ಪಟ್ಕರ್ ಮತ್ತು ಶ್ರೀಜಾ ಅಕುಲಾ ಜೋಡಿ 2-11, 11-8, 11-8, 11-6, 5-11, 11-5 ಅಂತರದಲ್ಲಿ ಸುತೀರ್ಥ ಮುಖರ್ಜಿ ಮತ್ತು ಅಯಿಕಾ ಮುಖರ್ಜಿ ವಿರುದ್ಧ ಗೆಲುವು ಪಡೆದು ಸ್ವರ್ಣ ಪದಕ ಪಡೆದುಕೊಂಡಿತು.

ಮಿಶ್ರ ಡಬಲ್‌ಸ್‌ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಹಾಗೂ ಸುತೀರ್ಥ ಮುಖರ್ಜಿ ಜೋಡಿಯು 11-6, 9-11, 11-6, 11-8 ಅಂತರದಲ್ಲಿ ಅಮಲ್ ರಾಜ್ ಮತ್ತು ಅಹಿಕಾ ಜೋಡಿಯ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com