ದಕ್ಷಿಣ ಏಷ್ಯನ್ ಕ್ರೀಡಾಕೂಟ: ಭಾರತ ವೇಟ್‌ಲಿಫ್ಟರ್ ಗಳಿಗೆ ನಾಲ್ಕು ಚಿನ್ನ

ಇಲ್ಲಿ ನಡೆದ 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟಿಂಗ್ (ಭಾರ ಎತ್ತುವ) ಸ್ಪರ್ಧಿಗಳು ನಾಲ್ಕು ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.
ದಕ್ಷಿಣ ಏಷ್ಯನ್ ಕ್ರೀಡಾಕೂಟ: ಭಾರತ ವೇಟ್‌ಲಿಫ್ಟರ್ ಗಳಿಗೆ ನಾಲ್ಕು ಚಿನ್ನ
ದಕ್ಷಿಣ ಏಷ್ಯನ್ ಕ್ರೀಡಾಕೂಟ: ಭಾರತ ವೇಟ್‌ಲಿಫ್ಟರ್ ಗಳಿಗೆ ನಾಲ್ಕು ಚಿನ್ನ

ಕಠ್ಮಂಡು: ಇಲ್ಲಿ ನಡೆದ 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟಿಂಗ್ (ಭಾರ ಎತ್ತುವ) ಸ್ಪರ್ಧಿಗಳು ನಾಲ್ಕು ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದಝಿಲ್ಲಿ ಡೆಲಬೆಹರಾ , ಒಟ್ಟು 151 ಕೆಜಿ (ಸ್ನ್ಯಾಚ್‌ನಲ್ಲಿ 66 ಕೆಜಿ ಮತ್ತು ಕ್ಲೀನ್ & ಜರ್ಕ್‌ನಲ್ಲಿ 85 ಕೆಜಿ) ಎತ್ತುವ ಮೂಲಕ 45 ಕೆಜಿ ವಿಭಾಗದ ಮಹಿಳೆಯರ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ.

49 ಕೆಜಿ ಅಡಿಯಲ್ಲಿ ನಡೆದ ಮಹಿಳೆಯರ ಸ್ಪರ್ಧೆಯಲ್ಲಿ ಸ್ನೇಹಾ ಸೊರೆನ್ ಸ್ನ್ಯಾಚ್‌ನಲ್ಲಿ 68 ಕೆಜಿ,  ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 89 ಕೆಜಿ ಎತ್ತುವ ಮೂಲಕ ಒಟ್ಟಾರೆ  157 ಕೆ.ಜಿ.ಭಾರ ಎತ್ತುವ ಮೂಲಕ ಸ್ವರ್ಣ ಪದಕ ಗಳಿಸಿದ್ದಾರೆ.

ಮಹಿಳೆಯರ 55 ಕೆಜಿ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ಎಸ್.ಬಿಂದ್ಯಾರಾಣಿ ದೇವಿ ಚಿನ್ನದ ಪದಕ ಗಳಿಸಿದ್ದಾರೆ. ಮಣಿಪುರದವರಾದ ಬಿಂದ್ಯಾರಾಣಿ  ಒಟ್ಟು 181 ಕೆ.ಜಿ ಭಾರವೆತ್ತಿ ಈ ಸಾಧನೆ ಮಾಡಿದರು.

ಭಾರತದ ನಾಲ್ಕನೇ ಮತ್ತು ಅಂತಿಮ ಚಿನ್ನವು ಪುರುಷರ 61 ಕೆಜಿ ವಿಭಾಗದಲ್ಲಿ ಸಿದ್ಧಾಂತ್ ಗೊಗೊಯ್ ಪಾಲಾಗಿದೆ.ಅವರು ಒಟ್ಟಾರೆ  264 ಕೆಜಿ ಭಾರವೆತ್ತಿ ಪ್ರಥಮ ಸ್ಥಾನ ಗಿಟ್ಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com