ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಗುರು ಎನ್. ಲಿಂಗಪ್ಪ ನಿಧನ

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ದಲ್ಲಿ ಆರು ದಶಕಗಳಿಗೆ ಹೆಚ್ಚು ಕಾಲ ಅಥ್ಲೆಟಿಕ್ಸ್ ಪಟುಗಳಿಗೆ ತರಬೇತಿ ನೀಡುತ್ತಿದ್ದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಗುರು ಎನ್. ಲಿಂಗಪ್ಪ (95) ನಿಧನರಾಗಿದ್ದಾರೆ.
ಎನ್. ಲಿಂಗಪ್ಪ
ಎನ್. ಲಿಂಗಪ್ಪ
Updated on
ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ದಲ್ಲಿ ಆರು ದಶಕಗಳಿಗೆ ಹೆಚ್ಚು ಕಾಲ ಅಥ್ಲೆಟಿಕ್ಸ್ ಪಟುಗಳಿಗೆ ತರಬೇತಿ ನೀಡುತ್ತಿದ್ದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಗುರು ಎನ್. ಲಿಂಗಪ್ಪ (95) ನಿಧನರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದಾಗಿ ಅವರು ತಮ್ಮ ನಿವಾಸದಲ್ಲೇ ಮಂಗಳವಾರ ನಿಧನರಾದರೆಂದು ಕುಟುಂಬ ಮೂಲಗಳು ಹೇಳಿದೆ.
ಲಿಂಗಪ್ಪ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ 2014ನೇ ಸಾಲಿನಲ್ಲಿ ಪ್ರತಿಷ್ಟಿತ ದ್ರೋಣಾಚಾರ್ಯ ಪುರಸ್ಕಾರ ನೀಡಿ ಗೌರವಿಸಿತ್ತು.
ಅಂತರಾಷ್ಟ್ರೀಯ ಖ್ಯಾತಿಯ ಅಶ್ವಿನಿ ನಾಚಪ್ಪ, ವಂದನಾ ರಾವ್, ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್ ಡಿವೈ ಬಿರಾದಾರ್ಪಿಸಿ ಪೊನ್ನಪ್ಪ ಸೇರಿ ಹಲವರಿಗೆ ಲಿಂಗಪ್ಪ ತರಬೇತುದಾರರಾಗಿದ್ದರು.
ಭಾರತೀಯ ಅಥ್ಲೆಟಿಕ್ ತಂಡದ ಸಹಾಯಕ ಕೋಚ್ ಆಗಿ ಸಹ ಸೇವೆ ಸಲ್ಲಿಸಿದ್ದ ಲಿಂಗಪ್ಪ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ [ರಶಸ್ತಿ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಗೌರವಗಳು ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com