ಅಡಿಡಾಸ್ ನಿಂದ ಏಷ್ಯನ್ ಗೇಮ್ಸ್ ಚಿನ್ನದ ಹುಡುಗಿ ಸ್ವಪ್ನಾಗೆ ವಿಶೇಷ ವಿನ್ಯಾಸದ ಶೂ

ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕುಟದಲ್ಲಿ ಚಿನ್ನದ ಪದಕ ಗಳಿಸಿದ್ದ ದೇಶದ ಹಿಪಾಥ್ಲೀಟ್ ಸ್ವಪ್ನಾ ಬರ್ಮನ್ ತಮ್ಮ 12 ಬೆರಳುಗಳುಳ್ಳ ಕಾಲುಗಳಿಗೆ ಹೊಂದುವ ವಿಶೇಷವಾಗಿ ...
ಸ್ವಪ್ನಾ ಬರ್ಮನ್
ಸ್ವಪ್ನಾ ಬರ್ಮನ್
ನವದೆಹಲಿ: ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕುಟದಲ್ಲಿ ಚಿನ್ನದ ಪದಕ ಗಳಿಸಿದ್ದ ದೇಶದ ಹಿಪಾಥ್ಲೀಟ್ ಸ್ವಪ್ನಾ ಬರ್ಮನ್  ತಮ್ಮ 12 ಬೆರಳುಗಳುಳ್ಳ ಕಾಲುಗಳಿಗೆ ಹೊಂದುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಶೂಗಳನ್ನು ಪಡೆದುಕೊಂಡಿದ್ದಾರೆ. ಜರ್ಮನ್ ಜಾಗತಿಕ ಕ್ರೀಡಾ ಉಪಕರಣಗಳ ತಯಾರಿಕಾ ಸಂಸ್ಥೆ  ಅಡಿಡಾಸ್ ಸ್ವಪ್ನಾಗಾಗಿಗೇ ವಿಶೇಷವಾಗಿ ಈ ಶೂಗಳನ್ನು ತಯಾರಿಸಿದೆ.
ಚಿನ್ನದ ಪದಕ ವಿಜೇತೆ ಅಥ್ಲೀಟ್ ಸ್ವಪ್ನಾ ತಮ್ಮ ಕಾಲುಗಳಿಗೆ ಹೊಂದಿಕೆಯಾಗದ ಶೂಗಳಿಂದ ಬಹಳವೇ ಸಮಸ್ಯೆ ಎದುರಿಸುತ್ತಿದ್ದರು. ಆ ಸಮಸ್ಯೆಯ ನಡುವೆಯೇ ಏಷ್ಯನ್ ಗೇಮ್ಸ್ ನಲ್ಲಿ ಪದಕವನ್ನು ಗಳಿಸಿದ್ದು ದೊಡ್ಡ ಸಾಧನೆಯೇ ಆಗಿತ್ತು.
"ಕಡೆಗೂ ನಾನು ನನಗೆ ಹೊಂದಿಕೆಯಾಗುವ ಶೂಗಳನ್ನು ಪಡೆದುಕೊಳ್ಳುತ್ತಿದ್ದೇನೆ.ನಾನು ಈಗಾಗಲೇ ಈ ತರಬೇತಿಯನ್ನು ಪ್ರಾರಂಭಿಸಿದ್ದೇನೆ ಮತ್ತು  ನನ್ನ ಸಮಸ್ಯೆಗಳ ಬಗ್ಗೆ ಯಾವ ಚಿಂತೆ ಇಲ್ಲದೆ ನನ್ನ ಪ್ರದರ್ಶನಗಳನ್ನು ಸುಧಾರಿಸುವಲ್ಲಿ  ನಾನಿನ್ನು ಮುಂದೆ ಸಂಪೂರ್ಣವಾಗಿ ಗಮನ ನಿಡಬಹುದಾಗಿದೆ" ಸ್ವಪ್ನಾ ಹೇಳಿದ್ದಾರೆ.
ತನಗೆ ಅನುಕೂಲವಾಗುವ ಶೂ ತಯಾರಿಸಿಕೊಟ್ಟ ಅಡಿಡಾಸ್ ಗೆ ಸಹ ಸ್ವಪ್ನಾ ಅಧನ್ಯವಾದ ಹೇಳಿದ್ದಾರೆ.
ದೇಶದ ಹೆಮ್ಮೆಯ ಕ್ರೀಡಾಪಟುವಾದ ಸ್ವಪ್ನಾ ಅವರಿಗೆ ಹೆಪ್ಟಾಥ್ಲಾನ್ ಗೆ ನೆರವಾಗಬಲ್ಲ ವಿಶೇಷ ಶೂಗಳನ್ನು ನಾವು ತಯಾರಿಸಿಕೊಟ್ಟಿದ್ದೇವೆ. ಇದಕ್ಕಾಗಿ ನಮಗೆ ಹೆಮ್ಮೆ ಇದೆ ಎಂದು ಅಡಿಡಾಸ್ ಇಂಡಿಯಾದ ಬ್ರ್ಯಾಂಡ್ ಮಾರ್ಕೆಟಿಂಗ್ ನಿರ್ದೇಶಕ ಶರದ್ ಸಿಂಗ್ಲಾ ಹೇಳಿದರು.
ಇನ್ನು ಅಡಿದಾಸ್ ಸ್ವಪ್ನಾ ಹೊರತಾಗಿ ಅಥ್ಲೀಟ್ ಗಳಾದ ಹಿಮಾ ದಾಸ್,  ನಿಖತ್ ಝರೀನ್ ಅವರುಗಳ ಕ್ರೀಡಾ ಸಾಧನಗಳಲ್ಲಿನ ಬದಲಾವಣೆ ಮಾಡಿಕೊಡಲು ಒಪ್ಪಂದಗಳಿಗೆ ಸಹಿ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com