ನಾನು ಸಲಿಂಗ ಸಂಬಂಧದಲ್ಲಿದ್ದೇನೆ: ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

ಏಷ್ಯನ್ ಗೇಮ್ಸ್ ನಲ್ಲಿ 100 ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆಯಾಗಿರುವ ಭಾರತದ ಖ್ಯಾತ ಅಥ್ಲೆಟಿಕ್ ತಾರೆ ದ್ಯುತಿ ಚಂದ್ ತಾವು ಸಲಿಂಗ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.
ದ್ಯುತಿ ಚಂದ್
ದ್ಯುತಿ ಚಂದ್
Updated on
ನವದೆಹಲಿ: ಏಷ್ಯನ್ ಗೇಮ್ಸ್ ನಲ್ಲಿ 100 ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆಯಾಗಿರುವ ಭಾರತದ ಖ್ಯಾತ ಅಥ್ಲೆಟಿಕ್ ತಾರೆ ದ್ಯುತಿ ಚಂದ್ ತಾವು ಸಲಿಂಗ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸ್ವಗ್ರಾಮದ ಓರ್ವ ಯುವತಿಯಲ್ಲಿ ತಾನು ತನ್ನ ಪ್ರಾಣಪ್ರಿಯೆ(ಸೋಲ್ ಮೇಟ್) ಯನ್ನು ಕಂಡುಕೊಂಡೆನೆಂದು ದ್ಯುತಿ ಬಹಿರಂಗಪಡಿಸಿದ್ದಾರೆ.
ಸಲಿಂಗ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿರುವ ಭಾರತದ ಮೊದಲ ಕ್ರಿಡಾಪಟುವಾಗಿರುವ ದ್ಯುತಿ ಚಂದ್ ತನ್ನ ಸಹವರ್ತಿ ಯಾರೆನ್ನುವುದನ್ನು ಬಹಿರಂಗಪಡಿಸಿಲ್ಲ. ಹಾಗೊಮ್ಮೆ ಬಹಿರಂಗಪಡಿಸಿ "ಅನಪೇಕ್ಷಿತ"ವಾಗಿ ಸುದ್ದಿಯ ಕೇಂದ್ರವಾಗಿಸುವುದು ಅವರಿಗಿಷ್ಟವಿಲ್ಲ ಎಂದಿದ್ದಾರೆ.
ಒಡಿಶಾ ರಾಜ್ಯದವರಾದ ದ್ಯುತಿ ಚಂದ್ ಕೆಲವು ವರ್ಷಗಳಿಂದ ಪರಿಚಯವಿದ್ದ ತಮ್ಮ ಸ್ವಗ್ರಾಮ ಗೆಳತಿಯೊಡನೆ ಸಲಿಂಗ ಸಂಬಂಧವಿರಿಸಿಕೊಂಡಿದ್ದಾರೆ.
"ತಮಗಿಷ್ಟವಾದ ವ್ಯಕ್ತಿಯೊಡನೆ ಜೀವನ ನಡೆಸುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದೆ. ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಸದಾ ಮುಂದಿರುತ್ತೇನೆ." ದ್ಯುತಿ ಹೇಳಿದ್ದಾರೆ.
ಸಧ್ಯ ವಿಶ್ವಚಾಂಪಿಯನ್ ಶಿಪ್ ಹಾಗೂ ಒಲಂಪಿಕ್ಸ್ ಗಾಗಿ ಅಭ್ಯಾಸ ನಡೆಸುತ್ತಿರುವ ದ್ಯುತಿ ಮುಂದಿನ ದಿನಗಳಲ್ಲಿ ತಮ್ಮ ಗೆಳತಿಯೊಡನೆ ಸಹಜೀಓವನ ನಡೆಸಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಭಾರತದ ಸುಪ್ರೀಂ ಕೋರ್ಟ್ ಸಲಿಂಗಕಾಮ ಅಪರಾಧವೆನ್ನುವ ಸೆಕ್ಷನ್ 377 ನ್ನು ತೆಗೆದು ಹಾಕಿದೆ. ಆದರೆ ಇದುವರೆಗೆ ಸಲಿಂಗ ವಿವಾಹವನ್ನು ಕಾನೂನುಬದ್ದಗೊಳಿಸುವ ನಿಯಮಾವಳಿಗಳು ನಮ್ಮ ದೇಶದಲ್ಲಿ ಜಾರಿಗೆ ಬಂದಿಲ್ಲ.
"ಕ್ರೀಡಾಪಟುವಾಗಿ ಮುಂದುವರಿಯಲು ನನ್ನನ್ನು ಪ್ರೋತ್ಸಾಹಿಸುವ ಯಾರೊಬ್ಬರೊಂದಿಗೆ ನಾನು ಜೀವನವನ್ನು ಹಂಚಿಕೊಳ್ಲಬಯಸುತ್ತೇನೆ. ಕಳೆದ 10 ವರ್ಷಗಳಿಂದ ನಾನು ಓಟಗಾರ್ತಿಯಾಗಿದ್ದೇನೆ.  ಮುಂದಿನ 5 ರಿಂದ ಏಳು ವರ್ಷದಲ್ಲಿ ಇನ್ನಷ್ಟು ಸಾಧನೆ ಮಾಡುವವಳಿದ್ದೇನೆ. ಇದಕ್ಕಾಗಿ ನಾನು ವಿಶ್ವವನ್ನೆಲ್ಲಾ ಸುತ್ತಬೇಕಿದೆ. ಇದು ಸುಲಭ ಸಾಧ್ಯವಲ್ಲ. ಹಾಗಾಗಿ ನನಗೆ ವೈಯುಕ್ತಿಕವಾಗಿ ಬೆಬಲಿಸಲು ಒಬ್ಬ ವ್ಯಕ್ತಿಯ ಅಗತ್ಯವಿತ್ತು. ಅದಕ್ಕಾಗಿ ಈಗ ನನಗೆ ನನ್ನ ಗೆಳತಿ ದೊರಕಿದ್ದಾಳೆ" ದ್ಯುತಿ ಹೇಳಿದರು.
ಒಡಿಶಾದ ಜಜ್ಪುರ್ ಜಿಲ್ಲೆಯ ನೇಕಾರರ ಗ್ರಾಮವಾದ ಚಾಕಾ ಗೋಪಾಪುರದಲ್ಲಿ ಜನಿಸಿದ ದ್ಯುತಿ ಭಾರತದ ಅತ್ಯಂತ ಮಹತ್ವದ ಅಥ್ಲೀಟ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com