ಫಿಫಾ ವಿಶ್ವಕಪ್‌ ಗೆಲ್ಲುವ ಕುರಿತು ಲಿಯೊನೆಲ್‌ ಮೆಸ್ಸಿಗೆ ಒಬಾಮಾ ಸಲಹೆ!

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ವಿಶ್ವ ಶ್ರೇಷ್ಠ ಫುಟ್ಬಾಲ್‌ ತಾರೆ ಹಾಗೂ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ ಅವರಿಗೆ ಫಿಫಾ ವಿಶ್ವಕಪ್‌ ಗೆಲ್ಲುವ ಕುರಿತು ಪ್ರಮುಖ ಸಲಹೆಗಳನ್ನು...
ಬರಾಕ್ ಒಬಾಮಾ-ಲಿಯೊನಲ್ ಮೆಸ್ಸಿ
ಬರಾಕ್ ಒಬಾಮಾ-ಲಿಯೊನಲ್ ಮೆಸ್ಸಿ
ಬಗೋಟಾ: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ವಿಶ್ವ ಶ್ರೇಷ್ಠ ಫುಟ್ಬಾಲ್‌ ತಾರೆ ಹಾಗೂ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ ಅವರಿಗೆ ಫಿಫಾ ವಿಶ್ವಕಪ್‌ ಗೆಲ್ಲುವ ಕುರಿತು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಕಳೆದ 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟೀನಾ ಮೊದಲ ನಾಕೌಟ್‌ ಪಂದ್ಯದಲ್ಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿತ್ತು. ಇದಕ್ಕೂ ಮುನ್ನ 2014ರ ಆವೃತ್ತಿಯಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋಲು ಅನುಭವಿಸುವ ಮೂಲಕ ತೀವ್ರ ನಿರಾಸೆಗೆ ಜಾರಿತ್ತು.
ಇಲ್ಲಿನ ಇಎಕ್ಸ್‌ಎಂಎ ಸಮ್ಮೇಳನದಲ್ಲಿ ಸಂದರ್ಶನದಲ್ಲಿ ಮಾತನಾಡಿದ ಬರಾಕ್‌ ಒಮಾಮ, "ಅರ್ಜೆಂಟೀನಾ ಫುಟ್ಬಾಲ್‌ ತಂಡ ವಿಶ್ವದ ಶ್ರೇಷ್ಠ ತಂಡ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಒಂದು ತಂಡವಾಗಿ ಅರ್ಜೆಂಟೀನಾ ಆಡುವುದಿಲ್ಲ. ಹಾಗಾಗಿ, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಮೆಸ್ಸಿ ಬಳಗ ವೈಫಲ್ಯ ಅನುಭವಿಸುತ್ತಿದೆ" ಎಂದು ಹೇಳಿದರು.
"ಅರ್ಜೆಂಟೀನಾ ತಂಡದಲ್ಲಿ ಲಿಯೊನೆಲ್‌ ಮೆಸ್ಸಿ ಅದ್ಭುತ ಆಟಗಾರ. ಆದರೆ, ಇತರೆ ಆಟಗಾರರಲ್ಲಿ ಸಮಸ್ಯೆ ಇದೆ. ಹಾಗಾಗಿ, ಯುವ ಪ್ರತಿಭಾವಂತರಿಗೆ ಮಣೆಹಾಕಬೇಕು. ಅವರಿಗೆ ಹೆಚ್ಚು ಅವಕಾಶ ಸಿಕ್ಕಾಗ ಅವರ ಸ್ವಂತ ಶೈಲಿಯಲ್ಲಿ ಆಡಿ ಅಸಾಧ್ಯವಾದದನ್ನು ಸಾಧಿಸಲಿದ್ದಾರೆ ಎಂದು ನಾಯಕ ಮೆಸ್ಸಿಗೆ ಸಲಹೆ ನೀಡಿದ್ದಾರೆ.
ಬ್ರೆಜಿಲ್‌ ನಲ್ಲಿ ಕೊಪ ಅಮೆರಿಕಾ ಟೂರ್ನಿ ಮುಂದಿನ ತಿಂಗಳು ಆರಂಭವಾಗಲಿದ್ದು, ಒಬಾಮ ಸಲಹೆ ಅರ್ಜೆಂಟೀನಾ ತಂಡಕ್ಕೆ ನೆರವಾಗಬಹುದು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com