ಪ್ಯಾರೀಸ್: ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.
ನಡಾಲ್ ಅವರು ಕಳೆದ ವರ್ಷ ನವಂಬರ್ 4 ರಂದು ಅಗ್ರ ಶ್ರೇಯಾಂಕ ಅಲಂಕರಿಸಿದ್ದರು. ಇದಾದ ಸರಿಯಾಗಿ ಒಂದು ವರ್ಷದ ಬಳಿಕ ನಡಾಲ್ ಅವರು ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಅವರು ಪ್ಯಾರೀಸ್ ಮಾಸ್ಟರ್ಸ್ ಚಾಂಪಿಯನ್ ಆಗಿ ಐದು ಬಾರಿ ಹೊರ ಹೊಮ್ಮಿದರು. ಆದರೂ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ನಡಾಲ್ ಈ ಹಿಂದೆ 2008, 2010, 2013 ಮತ್ತು 2017 ರಲ್ಲಿ ಪ್ರಥಮ ಸ್ಥಾನದೊಂದಿಗೆ ವರ್ಷವನ್ನು ಮುಗಿಸಿದ್ದರು. ಎಟಿಪಿ ಫೈನಲ್‌ನಲ್ಲಿ ನಡಾಲ್ ಪ್ರಥಮ ಸ್ಥಾನದಲ್ಲಿದ್ದರೆ. 2008 ರ ಆಗಸ್ಟ್ 18 ರಂದು 22 ನೇ ವಯಸ್ಸಿನಲ್ಲಿ ಸ್ಪೇನ್‌ನ ನಡಾಲ್ ಮೊದಲ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು. ಅಲ್ಲದೆ ಅವರು 46 ವಾರಗಳಲ್ಲಿ ಅಗ್ರಸ್ಥಾನದಲ್ಲಿದ್ದರು. 2010–11ರಲ್ಲಿ 56, 2013–2014ರಲ್ಲಿ 39, 2017–18ರಲ್ಲಿ 26 ವಾರಗಳು, ಏಪ್ರಿಲ್‌ನಲ್ಲಿ ಆರು ವಾರಗಳು - 2018 ರಲ್ಲಿ ಮೇ, ನಾಲ್ಕು ವಾರಗಳು ಮೇ - ಜೂನ್‌ನಲ್ಲಿ ಮತ್ತು ಜೂನ್ - ನವೆಂಬರ್‌ನಲ್ಲಿ 19 ವಾರಗಳ ಕಾಲ್ ಅಗ್ರ ಸ್ಥಾನದಲ್ಲಿದ್ದರು.
ಸದ್ಯ ನಡಾಲ್ ಅವರು 9585 ಅಂಕಗಳನ್ನು ಕಲೆ ಹಾಕಿದ್ದಾರೆ. ಜೋಕೊ 8945 ಅಂಕಗಳೊಂದಿಗೆ ಎರಡನೇ ಹಾಗೂ ರೋಜರ್ ಫೆಡರರ್ 6190 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
Advertisement