ಲಂಡನ್: ಸ್ವಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಫನೋಸ್ ಸಿಟ್ಸಿಪಸ್ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ ಅವರ ಏಳನೇ ಎಟಿಪಿ ಫೈನಲ್ಸ್ ಗೆಲ್ಲುವ ಕನಸು ಭಗ್ನವಾಯಿತು.
ಶನಿವಾರ ತಡರಾತ್ರಿ (ಭಾರತದ ಕಾಲಮಾನ) ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ 21ರ ಪ್ರಾಯದ ಗ್ರೀಕ್ ಪ್ರತಿಭಾವಂತ ಆಟಗಾರ ಸಿಟ್ಸಿಪಸ್ ಅವರು 6-3, 6-4 ಅಂತರದ ನೇರ ಸೆಟ್‍ಗಳಲ್ಲಿ 20 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ಗೆದ್ದು ಫೈನಲ್ ತಲುಪಿದರು.
ನಾಳೆ ನಡೆಯುವ ಎಟಿಪಿ ಫೈನಲ್ ಪಂದ್ಯದಲ್ಲಿ ಸಿಟ್ಸಿಪಸ್ ಅವರು ಡೊಮಿನಿಚ್ ವಿರುದ್ಧ ಸೆಣಸಲಿದ್ದಾರೆ. ಡೊಮಿನಿಚ್ ಥೀಮ್ ಮತ್ತೊಂದು ಸೆಮಿಫೈನಲ್ಸ್ ಹಣಾಹಣಿಯಲ್ಲಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 7-5, 6-3 ಅಂತರದಲ್ಲಿ ಜಯ ಸಾಧಿಸಿದ್ದರು
Advertisement