ಎಟಿಪಿ ಫೈನಲ್ಸ್: ಗ್ರೀಕ್ ಆಟಗಾರ ಸಿಟ್ಸಿಪಾಸ್ ಗೆ ಪ್ರಶಸ್ತಿ

ಗ್ರೀಕ್ ಟೆನಿಸ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಭಾನುವಾರ ನಡೆದ ಟೆನಿಸ್ ಎಟಿಪಿ ಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದರು.
ಸ್ಟೆಫಾನೊಸ್ ಸಿಟ್ಸಿಪಾಸ್
ಸ್ಟೆಫಾನೊಸ್ ಸಿಟ್ಸಿಪಾಸ್

ಮಾಸ್ಕೋ: ಗ್ರೀಕ್ ಟೆನಿಸ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಭಾನುವಾರ ನಡೆದ ಟೆನಿಸ್ ಎಟಿಪಿ ಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದರು.

ಲಂಡನ್‌ನ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ತ್ಸಿಸಿಪಾಸ್, ಐದನೇ ಶ್ರೇಯಾಂಕದ ಥೀಮ್ ಅವರನ್ನು ಸೋಲಿಸಿದರು 6-7 (6-8), 6-2, 7-6 (7-4) ರಿಂದ 2 ಗಂಟೆ 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ದಾಖಲಿಸಿದರು. ಈ ಮೂಲಕ 18 ವರ್ಷಗಳಲ್ಲಿ ಕ್ರೀಡಾ ಋತುವಿನ ಅಂತ್ಯದ ಅತ್ಯಂತ ಕಿರಿಯ ಚಾಂಪಿಯನ್ ಎನಿಸಿದರು.

21 ವರ್ಷದ ಚಾಂಪಿಯನ್ ಸ್ಟೆಫಾನೊಸ್ ಪಾಲಿಗಿದೊಂದ್ಯು ಅದ್ಭುತ ಕ್ಷಣವಾಗಿತ್ತು. 

ಎಟಿಪಿ ಫೈನಲ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಒಲಿದಿದ್ದು ಇದು ನಾಲ್ಕನೇ ಬಾರಿಯಾಗಿದೆ. ಈ ಮುನ್ನ 2016 ರಲ್ಲಿ ಆಂಡಿ ಮುರ್ರೆ, 2017 ರಲ್ಲಿ ಗ್ರೆಗರ್ ಡಿಮಿಟ್ರೋವ್ ಮತ್ತು ಕಳೆದ ವರ್ಷ ಅಲೆಕ್ಸಾಂಡರ್ ಜ್ವೆರೆವ್ ಅವರುಗಳಿಗೆ ಚೊಚ್ಚಲ ಚಾಂಪಿಯನ್ ಪಟ್ಟ ಲಭಿಸಿತ್ತು.

ಇದಕ್ಕೂ ಮೊದಲು ಫ್ರೆಂಚ್ ಜೋಡಿ ನಿಕೋಲಾಸ್ ಮಾಹುತ್ ಮತ್ತು ಪಿಯರೆ-ಹ್ಯೂಸ್ ಹರ್ಬರ್ಟ್ ದಕ್ಷಿಣ ಆಫ್ರಿಕಾದ ರಾವೆನ್ ಕ್ಲಾಸೆನ್ ಮತ್ತು ನ್ಯೂಜಿಲೆಂಡ್‌ನ ಮೈಕೆಲ್ ವೀನಸ್ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com