ಮನು ಭಾಕರ್
ಕ್ರೀಡೆ
ವಿಶ್ವಕಪ್ ಫೈನಲ್: ಭಾರತದ ಶೂಟರ್ ಮನು ಭಾಕರ್ ಗೆ ಚಿನ್ನದ ಪದಕ
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕಿರಿಯರ ವಿಭಾಗದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಮನು ಭಾಕರ್ ಚಿನ್ನದ ಪದಕ ಗಳಿಸಿದ್ದಾರೆ.
ಪುಟಿಯಾನ್(ಚೀನಾ): ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕಿರಿಯರ ವಿಭಾಗದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಮನು ಭಾಕರ್ ಚಿನ್ನದ ಪದಕ ಗಳಿಸಿದ್ದಾರೆ.
17 ವರ್ಷದ ಮನು ಭಾಕರ್ 244.7 ಪಾಯಿಂಟ್ ಗಳಿಸಿ ಚಿನ್ನದ ಪದಕಗೆ ಮುತ್ತಿಟ್ಟರೆ, ಭಾರತದ ಮತ್ತೊಬ್ಬ ಆಟಗಾರ್ತಿ ಯಶಸ್ವಿನಿ ಸಿಂಗ್ ದೆಸ್ವಾಲ್ 6 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಸರ್ಬಿಯಾದ ಝೊರಾನಾ ಅರುಣೊವಿಕ್ 241.9 ಪಾಯಿಂಟ್ ಗಳೊಂದಿಗೆ ಬೆಳ್ಳಿ ಪದಕ, ಚೀನಾದ ಕ್ವಿಯಾನ್ ವಾಂಗ್ 221.8 ಅಂಕಗಳೊಂದಿಗೆ ಕಂಚಿನ ಪದಕ ಗಳಿಸಿದ್ದಾರೆ.
ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಅಭಿಷೇಕ್ ವರ್ಮ ಮತ್ತು ಸೌರಭ್ ಚೌಧರಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

