ಎಟಿಪಿ ಚಾಲೆಂಜರ್:ಸೆಮೀಸ್ ನಲ್ಲಿ ಸೋಲುಂಡ ಸುಮಿತ್ ನಗಾಲ್
ನವದೆಹಲಿ: ಭಾರತದ ಭರವಸೆಯ ಆಟಗಾರ ಸುಮಿತ್ ನಗಾಲ್ ಅವರು ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಚಾಲೆಂಜರ್ಸ್ ಟೆನಿಸ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶನಿವಾರ ನಡೆದ ಉಪಾಂತ್ಯ ಪಂದ್ಯದಲ್ಲಿ ಸುಮಿತ್ 4-6, 1-6 ರಿಂದ ಅರ್ಜೆಂಟೀನಾದ ಜುವಾನ್ ಪ್ಯಾಬ್ಲೊ ಫಿಕೋವಿಚ್ ವಿರುದ್ಧ ನಿರಾಸೆ ಅನುಭವಿಸಿದರು. ಒಂದು ಗಂಟೆ 21 ನಿಮಿಷದ ಹೋರಾಟದಲ್ಲಿ ಸುಮಿತ್ ಅಂಕ ಕಲೆ ಹಾಕಲು ಪರದಾಡಿದರು.
ಆರಂಭದಿಂದಲೂ ಸುಮಿತ್ ಒತ್ತಡಕ್ಕೆ ಒಳಗಾದರು. ಮೊದಲ ಸೆಟ್ ನಲ್ಲಿ ಸುಮಿತ್ ಅವರ ಸರ್ವ್ ಗಳಿಗೆ ಉತ್ತರ ನೀಡಿದ ಜುವಾನ್ ಪ್ಯಾಬ್ಲೊ ಫಿಕೋವಿಚ್ ಅಂಕಗಳನ್ನು ಕಲೆ ಹಾಕಿದರು. ಅಲ್ಲದೆ ಈ ಹಂತದಲ್ಲಿ ತಮ್ಮ ಸರ್ವ್ ಉಳಿಸಿಕೊಳ್ಳುವಲ್ಲಿ ಸಫಲರಾದರು. ಮೊದಲ ಸೆಟ್ 45 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.
ಎರಡನೇ ಸೆಟ್ ನಲ್ಲಿ ಆರಂಭದ ಮೂರು ಗೇಮ್ ಗಳಲ್ಲಿ ಹಿನ್ನಡೆ ಅನುಭವಿಸಿದರೂ, ಧೃತಿ ಗೆಡದೆ ಆಡಿ ನಾಲ್ಕನೇ ಗೇಮ್ ನಲ್ಲಿ ಪುಟಿದೆದ್ದರು. ಆದರೆ, ಇವರ ರಣ ತಂತ್ರವನ್ನು ಅರಿತು ಆಡಿದ ಎದುರಾಳಿ ಆಟಗಾರ ಅಂಕ ಕಲೆ ಹಾಕಿ ಅಬ್ಬರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ