ಶೂಟಿಂಗ್ ವಿಶ್ವಕಪ್: ಮನು ಭಾಕರ್-ಸೌರಭ್ ಚೌಧರಿಗೆ ಸ್ವರ್ಣ, 9 ಪದಕಗಳ ಗಳಿಸಿ ಅಗ್ರಸ್ಥಾನಕ್ಕೇರಿದ ಭಾರತ
ಕ್ರೀಡೆ
ಶೂಟಿಂಗ್ ವಿಶ್ವಕಪ್: ಮನು ಭಾಕರ್-ಸೌರಭ್ ಚೌಧರಿಗೆ ಸ್ವರ್ಣ, 9 ಪದಕ ಗಳಿಸಿ ಅಗ್ರಸ್ಥಾನಕ್ಕೇರಿದ ಭಾರತ
ಬ್ರಿಜಿಲ್ ನ ರಿಯೊ ಡಿ ಜನೈರೊನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 9 ಪದಕಗಳೊಡನೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ರಿಯೊ ಡಿ ಜನೈರೊ: ಬ್ರಿಜಿಲ್ ನ ರಿಯೊ ಡಿ ಜನೈರೊನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 9 ಪದಕಗಳೊಡನೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸೋಮವಾರದ ಪಂದ್ಯದಲ್ಲಿ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರನ್ನೊಳಗೊಂಡ ತಂಡ 0 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿಕೊಂಡಿದೆ.ಇದೇ ಪಂದ್ಯಾವಳಿಯಲ್ಲಿ ಭಾರತದವರೇ ಆದ ಯಶಸ್ವಿನಿ ದೇಸ್ವಾಲ್ ಮತ್ತು ಅಭಿಷೇಕ್ ವರ್ಮಾ ಅವರಿದ್ದ ತಂಡ ಬೆಳ್ಳಿಯ ಪದಕ ಜಯಿಸಿದೆ.
ಇನ್ನೊಂದೆಡೆ ಅಪೂರ್ವಿ ಚಾಂಡೇಲಾ ಹಾಗೂ ದೀಪಕ್ ಕುಮಾರ್ ಜೋಡಿ ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದು ಕೊಟ್ಟಿದೆ.ಇದರೊಡನೆ ಏಕೈಕ ಜೂನಿಯರ್ ವಿಶ್ವಕಪ್ ಸೇರಿದಂತೆ ಈ ವರ್ಷದ ಎಲ್ಲಾ ನಾಲ್ಕು ಐಎಸ್ಎಸ್ಎಫ್ ವಿಶ್ವಕಪ್ ಕೂಟಗಳಲ್ಲಿ ಭಾರತ ಅಗ್ರ ಸ್ಥಾನ ಪಡೆದು ಸಾಧನೆ ಮಾಡಿದೆ.
ಈ ಸಾಲಿನಲ್ಲಿ ನಡೆದ ಹಿರಿಯರ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತ 16 ಚಿನ್ನ 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಡನೆ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ..


