ಲಕ್ಷ್ಯ ಸೇನ್
ಕ್ರೀಡೆ
ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್: ಲಕ್ಷ್ಯ ಸೇನ್ ಫೈನಲ್ ಗೆ ಲಗ್ಗೆ
ಬೆಲ್ಜಿಯಂನ ಲ್ಯುವೆನ್‌ನಲ್ಲಿ ನಡೆದ ಬೆಲ್ಜಿಯಂ ಇಂಟರ್ನಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಲ್ಯುವೆನ್(ಬೆಲ್ಜಿಯಂ): ಬೆಲ್ಜಿಯಂನ ಲ್ಯುವೆನ್‌ನಲ್ಲಿ ನಡೆದ ಬೆಲ್ಜಿಯಂ ಇಂಟರ್ನಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಡೆನ್ಮಾರ್ಕ್‌ನ ಕಿಮ್ ಬ್ರೂನ್ ವಿರುದ್ಧ 21-18, 21-11 ನೇರ ಸೆಟ್ ಗಳಿಂದ ಗೆಲುವು ಸಾಧಿಸಿ ನಂತರ ಅಂತಿಮ ಘಟ್ಟ ಪ್ರವೇಶಿಸಿದ್ದಾರೆ.
ಏಷ್ಯನ್ ಜೂನಿಯರ್ ಚಾಂಪಿಯನ್ ಲಕ್ಷ್ಯ ಸೇನ್ 48 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ ಬ್ರೂನ್ ಅವರನ್ನು ಮಣಿಸಿದ್ದಾರೆ. ಫೈನಲ್ಸ್ ಹಣಾಹಣಿಯಲ್ಲಿ ಸೇನ್ ಡೆನ್ಮಾರ್ಕ್‌ನ ಎರಡನೇ ಶ್ರೇಯಾಂಕದ ಆಟಗಾರ ವಿಕ್ಟರ್ ಸ್ವೆಂಡ್‌ಸೆನ್ ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ