ವಿಶ್ವ ಕುಸ್ತಿ: ಬಜರಂಗ್ ಪುನಿಯಾಗೆ ಕಂಚಿನ ಕಿರೀಟ!

ಕಝಕಿಸ್ತಾನದಲ್ಲಿ ನಡೆಯುತ್ತಿರ್ವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಕುಸ್ತಿಪಟು, ಬಜರಂಗ್ ಪುನಿಯಾ  ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ

ನೂರ್-ಸುಲ್ತಾನ್ (ಕಝಕಿಸ್ತಾನ): ಕಝಕಿಸ್ತಾನದಲ್ಲಿ ನಡೆಯುತ್ತಿರ್ವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಕುಸ್ತಿಪಟು, ಬಜರಂಗ್ ಪುನಿಯಾ  ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಮಂಗೋಲಿಯನ್ ಆಟಗಾರ ತುಲ್ಗಾ ತುಮರ್ ಒಚಾರ್ ಅವರ ವಿರುದ್ಧ ಕಾದಾಡಿ 6-0 ಕೊರತೆಯಿಂದ ಹಿಂದೆ ಬಿದ್ದು  8-7 ಅಂತರದಲ್ಲಿ ಕಂಚಿಗೆ ಕೊರಳೊಡ್ಡಿದ್ದಾರೆ.ಇದು  25 ವರ್ಗಳ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಎರಡನೇ ಸೀನಿಯರ್ ವಿಭಾಗದ ಪದಕವಾದರೆ ಒಟ್ಟಾರೆ ಮೂರನೇ ಪದಕವಾಗಿದೆ.

ಪ್ರಾರಂಭದಲ್ಲಿ ಮಂಗೋಲಿಯನ್ ಆಟಗಾರ ಮುನ್ನಡೆ ಸಾಧಿಸಿದ್ದು ಮೊದಲ ಸುತ್ತು ಪೂರ್ಣಗೊಳ್ಳುವ ವೇಳೆ ಸ್ಕೋರ್ 6-2 ಆಗಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಬಜರಂಗ್  ಲೆಗ್ ಶಾಟ್ ಮೂಲಕ ಎದುರಿಸಿದ್ದಲ್ಲದೆ  8-6 ಮುನ್ನಡೆ ಸಾಧಿಸಿದರು

2018ರಲ್ಲಿ ಬುಡಾಪೆಸ್ಟ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗಳಿಸಿದ ನಂತರ ಬಜರಂಗ್ ಪಾಲಿಗೆ ಇದು  ಸತತ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com