ತನ್ನ ತಂಡದೊಂದಿಗೆ ವೇದಾಂತ್(ಬಲಬದಿ)
ಕ್ರೀಡೆ
ನಟ ಆರ್ ಮಾಧವನ್ ಪುತ್ರ ವೇದಾಂತ್ ಈಗ ಅಂತಾರಾಷ್ಟ್ರೀಯ ಈಜು ಚಾಂಪಿಯನ್!
ಖ್ಯಾತ ನಟ ಆರ್ ಮಾಧವನ್ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರ ಪುತ್ರ 14 ವರ್ಷದ ವೇದಾಂತ್ ಏಷಿಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್ ಷಿಪ್, ಅಂತಾರಾಷ್ಟ್ರೀಯ ಈಜು ಸ್ಪರ್ಧೆ 4*100 ಮೀಟರ್ ಫ್ರೀಸ್ಟೈಲ್ ರಿಲೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ನವದೆಹಲಿ: ಖ್ಯಾತ ನಟ ಆರ್ ಮಾಧವನ್ ಸಂತೋಷಕ್ಕೆ ಪಾರವೇ ಇಲ್ಲ. ಅವರ ಪುತ್ರ 14 ವರ್ಷದ ವೇದಾಂತ್ 'ಏಷಿಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್ ಷಿಪ್', ಅಂತಾರಾಷ್ಟ್ರೀಯ ಈಜು ಸ್ಪರ್ಧೆ 4*100 ಮೀಟರ್ ಫ್ರೀಸ್ಟೈಲ್ ರಿಲೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ.
ವೇದಾಂತ್ ಜೊತೆಗೆ ಅವರ ತಂಡದಲ್ಲಿ ಭಾರತದಿಂದ ಉತ್ಕರ್ಷ್ ಪಾಟೀಲ್, ಸಾಹಿಲ್ ಲಸ್ಕರ್ ಮತ್ತು ಶೊವನ್ ಗಂಗೂಲಿ ಸ್ಪರ್ಧಿಸಿ ಬೆಳ್ಳಿಪದಕ ಗಳಿಸಿದ್ದಾರೆ. ಥೈಲ್ಯಾಂಡ್ ಗೆ ಚಿನ್ನದ ಪದಕ ಮತ್ತು ಜಪಾನ್ ಗೆ ಕಂಚಿನ ಪದಕ ಹೋಗಿದೆ.
ಇದನ್ನು ಆರ್ ಮಾಧವನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಕೂಡ ವೇದಾಂತ್ ತನ್ನ13ನೇ ವರ್ಷದ ಹುಟ್ಟುಹಬ್ಬ ಸಂದರ್ಭದಲ್ಲಿ ಥೈಲ್ಯಾಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದನು.

