ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ

 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಪ್ರಾರಂಭಿಕ ದಿನವಾದ ಸೋಮವಾರ  ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು  ಒಂದು ಕಂಚಿನ ಪದಕಗಳನ್ನು ಗಳಿಸುವುದರೊಡನೆ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.

Published: 03rd December 2019 12:08 AM  |   Last Updated: 03rd December 2019 12:10 AM   |  A+A-


ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ,ಸೇರಿ 4 ಪದಕಗಳ ಹಾರ

Posted By : Raghavendra Adiga
Source : PTI

ಪೋಖರಾ(ನೇಪಾಳ): 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಪ್ರಾರಂಭಿಕ ದಿನವಾದ ಸೋಮವಾರ  ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು  ಒಂದು ಕಂಚಿನ ಪದಕಗಳನ್ನು ಗಳಿಸುವುದರೊಡನೆ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.

ಪುರುಷರ ವೈಯಕ್ತಿಕ ಟ್ರಯಥ್ಲಾನ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಆದರ್ಶ ಎಂ.ಎನ್. ಸಿನಿಮೋಲ್ ಭಾರತಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟರೆ ಬಿಶ್ವರ್ಜಿತ್ ಶ್ರೀಖೋಮ್ ಬೆಳ್ಳಿ ಪದಕ ಗಳಿಸಿದ್ದಾರೆ.

ಮಹಿಳೆಯರ ವೈಯಕ್ತಿಕ ಪಂದ್ಯಾವಳಿಯಲ್ಲಿ ತೌದಮ್ ಸೊರೋಜಿನಿ ದೇವಿ ಮತ್ತು ಮೋಹನ್ ಪ್ರಜ್ಞಾ ಕ್ರಮವಾಗಿ ತಲಾ ಒಂದೊಂದು ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.  

ಕ್ರೀಡಾಕೂಟದಲ್ಲಿ  15 ಕ್ಕೂ ಹೆಚ್ಚು ವಿಭಾಗಗಳಲ್ಲಿ 487 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp