ದಕ್ಷಿಣ ಏಷ್ಯನ್ ಕ್ರೀಡಾಕೂಟ: ಈಜುಸ್ಪರ್ಧೆಯಲ್ಲಿ ಕರ್ನಾಟಕದ ಲಿಖಿತ್ ಗೆ ಬಂಗಾರ

13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡಿದ್ದು, ಕರ್ನಾಟಕದ ಈಜು ಪಟು ಲಿಖಿತ್ ಎಸ್.ಪಿ ಬಂಗಾರದ ಸಾಧನೆ ಮಾಡಿದ್ದಾರೆ.
ಲಿಖಿತ್ ಎಸ್.ಪಿ
ಲಿಖಿತ್ ಎಸ್.ಪಿ

ಕಠ್ಮಂಡು: 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡಿದ್ದು, ಕರ್ನಾಟಕದ ಈಜು ಪಟು ಲಿಖಿತ್ ಎಸ್.ಪಿ ಬಂಗಾರದ ಸಾಧನೆ ಮಾಡಿದ್ದಾರೆ.

ಲಿಖಿತ್ ಗುರುವಾರ ನಡೆದ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ 2 ನಿಮಿಷ 14.76 ಸೆಕಂಡ್ ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಅಲಂಕರಿಸಿದರು. ಇನ್ನೋರ್ವ ಭಾರತೀಯ ಕ್ರೀಡಾಪಟು  ದನುಷ್ ಸುರೇಶ್ 2: 19.27 ರಲ್ಲಿ ಗುರುಮುಟ್ಟಿ ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಗುರುವಾರ ಈಜು ವಿಭಾಗದಲ್ಲಿ ಭಾರತಕ್ಕೆ ಒಟ್ಟು 11 ಪದಕಗಳು ಬಂದಿದೆ. ಅವುಗಳಲ್ಲಿ ನಾಲ್ಕು ಚಿನ್ನ. ಆರು ಬೆಳ್ಳಿ ಮತ್ತು ಒಂದು ಕಂಚು ಸೇರಿದೆ. 

2: 38.05 ಸಮಯದೊಂದಿಗೆ ಪುರುಷರ 200 ಮೀ ಬ್ರೆಸ್ಟ್‌ಸ್ಟ್ರೋಕ್ (ಶಾರ್ಟ್ ಕೋರ್ಸ್) ಗೆದ್ದ ಅಪೆಕ್ಷಾ ಡೆಲಿಲಾ ಫರ್ನಾಂಡಿಸ್ ಈಜು ವಿಭಾಗದಲ್ಲಿ ಎರಡನೇ ಚಿನ್ನ ಗಳಿಸಿಕೊಟ್ಟಿದ್ದಾರೆ. ಮಹಿಳೆಯರ 400 ಮೀಟರ್ ಫ್ರೀಸ್ಟೈಲ್ ರಿಲೇ ತಂಡವು 3: 55.17 ಸಮಯದೊಂದಿಗೆ ಪದಕ ಗಳಿಸಿದ್ದರೆ ದಿವ್ಯಾ ಸತಿಜಾ ಮಹಿಳೆಯರ 100 ಮೀಟರ್ ಚಿಟ್ಟೆ (ಶಾರ್ಟ್ ಕೋರ್ಸ್ ನಲ್ಲಿ  ಪದಕದ ಸಾಧನೆ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com