13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ: ಕುಸ್ತಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ

13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಎಲ್ಲಾ 14 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್

ಕಠ್ಮಂಡು: 13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಎಲ್ಲಾ 14 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

ಸೋಮವಾರ, ಕುಸ್ತಿ ಪಂದ್ಯಗಳ ಅಂತಿಮ ದಿನದಂದು ಗೌರವ್ ಬಾಲಿಯನ್ ಪುರುಷರ 74 ಕೆಜಿ ವಿಭಾಗದಲ್ಲಿ ಮತ್ತು ಮಹಿಳೆಯರ 68 ಕೆಜಿಯಲ್ಲಿ ಅನಿತಾ ಶೋರನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಭಾರತ 7-7 ಚಿನ್ನದ ಪದಕಗಳನ್ನು ಗೆದ್ದಿದೆ. ಸಾಗ್ ಕ್ರೀಡಾಕೂಟದ ನಿಯಮಗಳ ಪ್ರಕಾರ, ಒಂದು ದೇಶವು 20 ವಿಭಾಗಗಳಲ್ಲಿ,  ಕೇವಲ 14 ವಿಭಾಗಗಳಲ್ಲಿ ಭಾಗವಹಿಸಬಹುದು.

ಇದಕ್ಕೂ ಮುನ್ನ ಭಾನುವಾರ ಸಾಕ್ಷಿ ಮಲಿಕ್ (62), ರವೀಂದರ್ (61), ಅನ್ಶು (59), ಪವನ್ ಕುಮಾರ್ (86) ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇತರ ಚಿನ್ನದ ವಿಜೇತರು ಸತ್ಯವ್ರತ್ ಕಡಿಯನ್ (97), ಸುಮಿತ್ ಮಲಿಕ್ (125), ಗುರ್ಷರನ್‌ಪ್ರೀತ್ ಕೌರ್ (76), ಸರಿತಾ ಮೌರ್ (57), ಶೀತಲ್ ತೋಮರ್ (50), ಪಿಂಕಿ (53), ರಾಹುಲ್ (57) ಮತ್ತು ಅಮಿತ್ ಕುಮಾರ್ (65).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com