ಬಾಕ್ಸಿಂಗ್: ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಅಮಿತ್, ಐತಿಹಾಸಿಕ ಸಾಧನೆಗೈದ ಮೊದಲ ಭಾರತೀಯ

ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ವಿಶ್ವ ಚಾಂಪಿಯನ್‌ಶಿಪ್‌ ನ ಪುರುಷರ 52 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Published: 20th September 2019 05:56 PM  |   Last Updated: 20th September 2019 05:56 PM   |  A+A-


ಅಮಿತ್ ಪಂಗಾಲ್

Posted By : Raghavendra Adiga
Source : The New Indian Express

ಎಕಟರಿನ್ ಬರ್ಗ್: ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ವಿಶ್ವ ಚಾಂಪಿಯನ್‌ಶಿಪ್‌ ನ ಪುರುಷರ 52 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಅಂತಿಮ ನಾಲ್ಕರ ಘಟ್ಟ- ಸೆಮಿಫೈನಲ್ಸ್ ನಲ್ಲಿ ಪಂಗಾಲ್ ಕಝಕಿಸ್ತಾನದ ಸಾಕೆನ್ ಬಿಬೋಸಿನೋವ್ ವಿರುದ್ಧ  3-2 ಅಂತರದಲ್ಲಿ ಗೆದ್ದು ಈ ಸಾಧನೆ ಮಾಡಿದ್ದಾರೆ. ತನ್ಮೂಲಕ ವಿಶ್ವ ಬಾಕ್ಸಿಂಗ್ ನಲ್ಲಿ ಅಂತಿಮ ಘಟ್ಟ ತಲುಪಿದ ಮೊದಲ ಭಾರತೀಯನೆಂಬ ಕೀರ್ತಿಗೆ ಭಾಜನರಾದರು.

ಶನಿವಾರ ನಡೆಯಲಿರುವ ಫೈನಲ್ಸ್ ನಲ್ಲಿ  ಪಂಗಾಲ್ ಉಜ್ಬೇಕಿಸ್ತಾನ್‌ನ ಶಾಖೋಬಿದಿನ್ ಜೊಯಿರೊವ್ ಅವರನ್ನು ಎದುರಿಸಲಿದ್ದಾರೆ. 

2017 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ ನಂತರ ಪಂಗಾಲ್ ಅವರ ಈ ಸಾಧನೆ ಇನ್ನಷ್ಟು ಉತ್ತಮವಾದುದಾಗಿದೆ.

ಇನ್ನೊಂದೆಡೆ ವಿಶ್ವ ಚಾಂಪಿಯನ್‌ಶಿಪ್‌ 63 ಕೆಜಿ ವಿಭಾಗದ ಸೆಮಿಫೈನಲ್ಸ್ ನಲ್ಲಿ ಭಾರತದ ಮನೀಶ್ ಕೌಶಿಕ್ ಕಂಚಿನ ಪದಕ ಗಳಿಸಿದ್ದಾರೆ. ಮನೀಶ್ ಕ್ಯೂಬಾದ ಆಂಡಿ ಗೋಮೆಝ್ ವಿರುದ್ಧ 0-5 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp