ಕೋವಿಡ್-19 ಹೋರಾಟಕ್ಕೆ ನೆರವಾಗಲು ಟ್ರೋಫಿ ಮಾರಿದ ಗಾಲ್ಫರ್ ಅರ್ಜುನ್
ನವದೆಹಲಿ: ಭಾರತದ ಯುವ ಗಾಲ್ಫರ್ ಅರ್ಜುನ್ ಭಾಟಿ, ಪ್ರಸ್ತುತ ದೇಶವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ಥಾಪಿಸಲಾಗಿರುವ ಪಿಎಂ-ಕೇರ್ಸ್ ನಿಧಿಗೆ 4.30 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಗ್ರೇಟರ್ ನೋಯ್ಡಾ ಮೂಲದ ಭಾಟಿ, ಕಳೆದ ಎಂಟು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆದ್ದ 102 ಟ್ರೋಫಿಗಳನ್ನು ಮಾರಾಟ ಮಾಡುವ ಮೂಲಕ ಈ ಮೊತ್ತವನ್ನು ಸಂಗ್ರಹಿಸಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಅವರ ಟ್ರೋಫಿಗಳಲ್ಲಿ ಮೂರು ವಿಶ್ವ ಗಾಲ್ಫ್ ಚಾಂಪಿಯನ್‌ಷಿಪ್ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್ ಪ್ರಶಸ್ತಿಗಳು ಸೇರಿವೆ.
"ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ದೇಶವು ಕಠಿಣ ಸಮಯವನ್ನು ಎದುರಿಸುತ್ತಿದೆ, ಕಠಿಣ ಪರಿಸ್ಥಿತಿ ಉದ್ಭವಿಸಿದ ಈ ಸಮಯದಲ್ಲಿ ದೇಶಕ್ಕೆ ಸಹಾಯ ಮಾಡಲು ನೀವೆಲ್ಲರೂ ಮುಂದೆ ಬರಬೇಕೆಂದು ನಾನು ಬಯಸುತ್ತೇನೆ. ನಿಮಗೆ ಸಾಧ್ಯವಾದಷ್ಟುಕೊಡುಗೆ ನೀಡಿ.
"ಕಳೆದ 8 ವರ್ಷಗಳಲ್ಲಿ, ನಾನು 102 ಟ್ರೋಫಿಗಳನ್ನು ಗೆದ್ದಿದ್ದೇನೆ,ಈಗ ನಾನದನ್ನು ಮಾರಾಟ ಮಾಡುತ್ತಿದ್ದು ನಾನುಪಿಎಂ-ಕೇರ್ಸ್ ನಿಧಿಗೆ 4 ಲಕ್ಷ 0 ಸಾವಿರ ರೂ. ಕೊಡುಗೆ ನೀಡಿದ್ದೇನೆ. ಪ್ರತಿಯೊಬ್ಬರೂ ಈ ಸಮಯವನ್ನು ಬಳಸಿಕೊಳ್ಳಬೇಕೆಂದು ಮತ್ತು ಮಾದರಿಯಾಗಬೇಕೆಂದು ನಾನು ಬಯಸುತ್ತೇನೆ
"ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಲು ನಾನು ಬಯಸಿದ್ದೆ. ನನ್ನ ಸ್ವಂತ ಸಂಪಾದನೆಯಿಲ್ಲದ ಕಾರಣ, ನನ್ನ ಟ್ರೋಫಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಟ್ರೋಫಿಗಳನ್ನು ನಂತರ ಗೆಲ್ಲಬಹುದು, ಆದರೆ ನನ್ನ ರಾಷ್ಟ್ರ ಕಷ್ಟದಲ್ಲಿದ್ದಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಹಣ. ಅಗತ್ಯವಾಗಿದೆ. ನನ್ನ ಸಂಬಂಧಿಕರು ಮತ್ತು ನನ್ನ ಹೆತ್ತವರ ಸ್ನೇಹಿತರು ವುಗಳನ್ನು ಖರೀದಿಸಿದ್ದಾರೆ. ಟ್ರೋಫಿಗಳು ಇನ್ನೂ ನನ್ನ ಮನೆಯಲ್ಲಿದ್ದರೂ, ಲಾಕ್‌ಡೌನ್ ಮುಗಿದ ನಂತರ ನಾನಿದನ್ನು ಅವರವರ ಮನೆಗಳಿಗೆ ತಲುಪಿಸುತ್ತೇನೆ." ಭಾಟಿ ಹೇಳಿದ್ದಾರೆ.
ಸೂಪರ್ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಿಂದ ಹಿಡಿದು ಬಾಕ್ಸಿಂಗ್ ಮತ್ತು ಟೆನಿಸ್ ದಂತಕಥೆಗಳಾದ ಮೇರಿ ಕೋಮ್ ಮತ್ತು ಸಾನಿಯಾ ಮಿರ್ಜಾ ಅವರವರೆಗೆ ವಿವಿಧ ಕ್ರೀಡಾಪಟುಗಳು ಕೊರೋನಾ ಹೋರಾಟಕ್ಕೆ ನೆರವನ್ನು ಇತ್ತಿದ್ದಾರೆ.


