ಕೊರೋನಾ ಲಾಕ್‌ಡೌನ್ ಮಧ್ಯೆ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ನೀಡಿದ ಲಿಯಾಂಡರ್ ಪೇಸ್!

ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈಗ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪೇಸ್ ಹೊಸ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ತಯಾರಾಗಿದ್ದಾರೆ. ಕೊರೋನಾ ಕಾರಣ ದೇಶವೇ ಲಾಕ್ ಡೌನ್ ಆಗಿ ಎಲ್ಲರೂ ಮನೆಗಳಲ್ಲಿರುವ ಕಾರಣ ತಮ್ಮ ಅಭಿಮಾನಿಗಳು ಈ ಚಾಲೆಂಜ್ ತೆಗೆದುಕೊಳ್ಳಿ ಎಂದು
ಲಿಯಾಂಡರ್ ಪೇಸ್!
ಲಿಯಾಂಡರ್ ಪೇಸ್!

ನವದೆಹಲಿ: ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈಗ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪೇಸ್ ಹೊಸ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ತಯಾರಾಗಿದ್ದಾರೆ. ಕೊರೋನಾ ಕಾರಣ ದೇಶವೇ ಲಾಕ್ ಡೌನ್ ಆಗಿ ಎಲ್ಲರೂ ಮನೆಗಳಲ್ಲಿರುವ ಕಾರಣ ತಮ್ಮ ಅಭಿಮಾನಿಗಳು ಈ ಚಾಲೆಂಜ್ ತೆಗೆದುಕೊಳ್ಳಿ ಎಂದು ಅವರು ಕೇಳಿದ್ದಾರೆ. 

ಈ ವಾರದ ಆರಂಭದಲ್ಲಿ, ಸ್ವಿಸ್ ಆಟಗಾರ ರೋಜರ್ ಫೆಡರರ್ ಚೆಂಡನ್ನು ಗೋಡೆಗೆ ಹೊಡೆದು ಸ್ವತಃ ವಾಲಿಂಗ್ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ವಿರಾಟ್ ಕೊಹ್ಲಿ, ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್ ಸೇರಿದಂತೆ ಅಭಿಮಾನಿಗಳು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಬೇಕೆಂದು  ಈಗ ಮತ್ತೆ ಒಂದು ಹೆಜ್ಜೆ ಮುಂದೆ ಹೋಗಿರುವ ಪೇಸ್  'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ನೊಡನೆ ಬಂದಿದ್ದಾರೆ.

" ಲಾಕ್‌ಡೌನ್‌ನಲ್ಲಿರುವಾಗ ನಿಮಗಾಗಿ ಒಂದು ಸವಾಲು ಇಲ್ಲಿದೆ! ನೀವು ಎಷ್ಟು ಬಾರಿ ಹೀಗೆ ಂಆಡಬಹುದು? ನಾನು ನಿಮ್ಮೆಲ್ಲರಿಗೆ ಗೆ ಸವಾಲು ಹಾಕುತ್ತಿದ್ದೇನೆ. ಫ್ರೈಯಿಂಗ್ ಪ್ಯಾನ್ ಚಾಲೆಂಜ್‌ನೊಂದಿಗೆ ನಿಮ್ಮ ವೀಡಿಯೋಗಳನ್ನು ಕಳಿಸಿ ನನ್ನನ್ನು ಟ್ಯಾಗ್ ಮಾಡಿ, ಮತ್ತು ನಾನು ಅತ್ಯುತ್ತಮವಾದ ಕೆಲವನ್ನು ಹಂಚಿಕೊಳ್ಳುವೆ. " ಪೇಸ್ ಹೇಳಿದ್ದಾರೆ. ಜತೆಗೆ ಚೆಂಡೊಂದನ್ನು  ಫ್ರೈಯಿಂಗ್ ಪ್ಯಾನ್‌ನಿಂದ ಹೊಡೆಯುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

 ಹಲವು ವರ್ಷಗಳಿಂದ ಪುರುಷರ ಡಬಲ್ಸ್‌ನಲ್ಲಿ ಪೇಸ್ ಜೊತೆಗಾರರಾಗಿದ್ದ ಮಹೇಶ್ ಭೂಪತಿ ಈ ವೀಡಿಯೋವನ್ನು ಎಟಿಪಿ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಾಕಿದ್ದು "ಮಾನವ ಏನೇ ವಸ್ತುವಿನಿಂದಲೂ ಗೋಡೆಗೆ ಹೊಡೆಯಬಹುದು!" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೊರೋನಾವೈರಸ್ ನಿಂದಾಗಿ ವಿಶ್ವದಾದ್ಯಂತ 88,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ, ಈ ಮಹಾಮಾರಿಯ ವಿರುದ್ಧ ಹೋರಾಟ ಸಾಗಿದ್ದು ದೇಅವು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆಗಿದೆ. ದೇಶದಲ್ಲಿ ಇದುವರೆಗೆ 160 ಕ್ಕೂ ಹೆಚ್ಚು ಜನ ಕೊರೋನಾವೈರಸ್ ಗೆ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com