ರೇಸ್ ವಾಕಿಂಗ್ ನಲ್ಲಿ ಭಾವನಾ ಜಾಟ್ ಹೊಸ ದಾಖಲೆ: ಟೋಕಿಯೋ ಒಲಂಪಿಕ್ಸ್ ಗೆ ಆಯ್ಕೆ
ಜೈಪುರ: ನಡಿಗೆ ಸ್ಪರ್ಧೆಯಲ್ಲಿ ರಾಜಸ್ಥಾನದ ಭಾವನಾ ಜಾಟ್ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದು, ಟೋಕಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ.
20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಭಾವನಾ ಜಾಟ್ 1 ತಾಸು 29.54 ನಿಮಿಷಗಳಲ್ಲಿ ಗುರಿಯನ್ನು ತಲುಪಿದ್ದು, ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದು, ವೈಯಕ್ತಿಕವಾಗಿ ಶ್ರೇಷ್ಠ ಸಾಧನೆಯನ್ನೂ ದಾಖಲಿಸಿದ್ದಾರೆ.
ರೇಸ್ ವಾಕಿಂಗ್ ನಲ್ಲಿ ಒಲಂಪಿಕ್ ಅರ್ಹತೆಗೆ 1 ತಾಸು 31 ನಿಮಿಷಗಳ ಗುರಿ ನಿಗದಿಪಡಿಸಲಾಗಿತ್ತು. ಕಳೆದ ವರ್ಷ ಭಾವನ ಅವರು 1 ತಾಸು 38.30 ನಿಮಿಷಗಳಲ್ಲಿ ಗುರಿ ತಲುಪಿದ್ದರು.
ರಾಜಸ್ಥಾನದ ಕಬ್ರಾ ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿರುವ ಭಾವನಾ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಾಧನೆಯ ಬಗ್ಗೆ ಭಾವನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ದಾಖಲೆ ನಿರ್ಮಿಸುವುದು ಸಂತಸ ಉಂಟುಮಾಡಿದೆ. ಇದಕ್ಕಾಗಿ 3-4 ತಿಂಗಳು ಶ್ರಮ ಪಟ್ಟಿದ್ದೇನೆ. ದಾಖಲೆ ಮುರಿದು ಅರ್ಹತೆ ಪಡೆಯುತ್ತೇನೆ ಎಂಬ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.
ಭಾವನಾ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಇಬ್ಬರು ಸಹೋದರರು ಸಹಕರಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಭಾವನ ಕಾಲೇಜು ವಿದ್ಯಾಭ್ಯಾಸ ಕೈಬಿಡಬೇಕಾಯಿತು. ಆದರೆ ತಮ್ಮ ಆಸಕ್ತಿಯ ಕ್ರೀಡೆಗೆ 10 ವರ್ಷಗಳಿಂದ ತಯಾರಿ ನಡೆಸುತ್ತಿದ್ದರು. ಶಾಲೆಯಲ್ಲಿರುವಾಗಲೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ