ಏಷ್ಯನ್ ಕುಸ್ತಿ: ರವಿಗೆ ಬಂಗಾರ, ಭಜರಂಗ್ ಸೇರಿ ಮೂವರಿಗೆ ಬೆಳ್ಳಿ ಹಾರ

ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಪುರುಷ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದು ರವಿ ದಹಿಯಾ 57 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದರೆ ಬಹು ನಿರೀಕ್ಷಿತ ಕುಸ್ತಿಪಟು, ಒಲಿಂಪಿಕ್ ಪದಕ ಭರವಸಯ ಆಟಗಾರ ಭಜರಂಗ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಶನಿವಾರದ ಸ್ಪರ್ಹೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ತನ್ನದಾಗಿಸ
ರವಿ ದಹಿಯಾ
ರವಿ ದಹಿಯಾ

ನವದೆಹಲಿ: ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಪುರುಷ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದು ರವಿ ದಹಿಯಾ 57 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದರೆ ಬಹು ನಿರೀಕ್ಷಿತ ಕುಸ್ತಿಪಟು, ಒಲಿಂಪಿಕ್ ಪದಕ ಭರವಸಯ ಆಟಗಾರ ಭಜರಂಗ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಶನಿವಾರದ ಸ್ಪರ್ಹೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.

ರವಿ ದಹಿಯಾ  ತಜಿಕಿಸ್ಥಾನದ ಹಿಕ್ಮತುಲ್ಲೊ ವೊಹಿದೋವ್‌ ವಿರುದ್ಧ 10-0ಅಂತರದಿಂದ ಭರ್ಜರಿ ಗೆಲುವು ಸಾಧ್ಗಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇದು ರವಿ ದಹಿಯಾ  ಪಾಲಿಗೆ ಏಷ್ಯನ್ ಕೂಟದಲ್ಲಿ ಸಿಕ್ಕಿದ ಮೊದಲ ಸ್ವರ್ಣ ಪದಕವಾಗಿದೆ.

65 ಕೆ.ಜಿ. ವಿಭಾಗದಲ್ಲಿ ಭಜರಂಗ್‌ ಪುನಿಯ ಜಪಾನಿನ ಟಕುಟೊ ಒಟುಗುರೊ ವಿರುದ್ಧ  2-10 ಅಂತರದಲ್ಲಿ ಪರಾಜಿತರಾಗಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

ಇನ್ನು 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸತ್ಯವೃತ್‌ ಕಾದಿಯಾನ್‌ ಇರಾನ್‌ನ ಮೊಜ¤ಬ ಮೊಹಮ್ಮದ್‌ ಶಫಿ ವಿರುದ್ಧ . 0-10 ಅಂತರದ ಹೀನಾಯ ಸೋಲು ಅನುಭವಿಸಿದರೆ  79 ಕೆ.ಜಿ. ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಗೌರವ್‌ ಬಲಿಯಾನ್‌ ಕಿರ್ಗಿಸ್ಥಾನದ ಅರ್ಸಾಲನ್‌ ಬುಡಝಪೋವ್‌ ವಿರುದ್ಧ  5-7 ಅಂತರದಲ್ಲಿ ಸೋಲು ಕಂಡು ಬೆಳ್ಳಿ ಪದಕ ದಕ್ಕಿಸಿಕೊಂಡರು. 

ಇನ್ನೊಂದೆಡೆ ಕಂಚಿನ ಪದಕಕ್ಕಾಗಿ ನಡೆಇದ್ದ ಸ್ಪರ್ಧೆಯಲ್ಲಿ ಭಾರತದ  ನವೀನ್‌ ಉಜ್ಬೆಕಿಸ್ಥಾನದ ಮಿರ್ಜಾನ್‌ ಅಶಿರೋವ್‌ ವಿರುದ್ಧ 70 ಕೆ.ಜಿ.ವಿಭಾಗದಲ್ಲಿ ಸೆಣೆಸಿ ಪರಾಜಿತರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com