ಆಸ್ಟ್ರೇಲಿಯಾ ಓಪನ್: ರೋಹನ್ ಬೋಪಣ್ಣ-ಸಾನಿಯಾ ಮಿರ್ಜಾ ಜೋಡಿ

ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ನ ಮಿಶ್ರಾ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಕಣಕ್ಕಿಳಿಯಲಿದೆ.
ರೋಹನ್ ಬೋಪಣ್ಣ-ಸಾನಿಯಾ ಮಿರ್ಜಾ
ರೋಹನ್ ಬೋಪಣ್ಣ-ಸಾನಿಯಾ ಮಿರ್ಜಾ
Updated on

ಚೆನ್ನೈ: ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ನ ಮಿಶ್ರಾ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಕಣಕ್ಕಿಳಿಯಲಿದೆ. 

ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಪರಸ್ಪರ ಆಟವಾಡದ ಈ ಭಾರತೀಯ ಜೋಡಿ ಇದೀಗ ಒಟ್ಟಾಗಿ ಆಡಲಿದ್ದಾರೆ. ಇನ್ನು ಸಾನಿಯಾಗೆ ಜೋಡಿಯಾಗಿ ಆಡಲು ರಾಜೀವ್ ರಾಮ್ ಮುಂದಾಗಿದ್ದರು. ಆದರೆ ಈ ಪಂದ್ಯಾವಳಿಯಿಂದ ನಿಂದ ಅವರು ಹೊರಬಂದಿದ್ದಾರೆ. 

ಈ ಬಗ್ಗೆ ಮಾತನಾಡಿರುವ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ಸಾನಿಯಾ ಅವರೊಂದಿಗೆ ಆಡಲಿದ್ದೇನೆ. ಆರಂಭದಲ್ಲಿ ರಾಜೀವ್ ರಾಮ್ ಮತ್ತು ಸಾನಿಯಾ ಜೊತೆಯಾಗಿ ಆಡುತ್ತಿದ್ದರು. ಆದರೆ ಟೂರ್ನಿಯಿಂದ ರಾಜೀವ್ ರಾಮ್ ಹೊರನಡೆದಿದ್ದರಿಂದ ಈಗ ನಾನು ಸಾನಿಯಾ ಜೊತೆ ಅಡಲಿದ್ದೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com